ತಪ್ಪಿತಸ್ಥರನ್ನು ಬಂಧಿಸದಿದ್ದರೆ ಉತ್ತರ ಕರ್ನಾಟಕ ಬಂದ್‌

7

ತಪ್ಪಿತಸ್ಥರನ್ನು ಬಂಧಿಸದಿದ್ದರೆ ಉತ್ತರ ಕರ್ನಾಟಕ ಬಂದ್‌

Published:
Updated:

ಹುಬ್ಬಳ್ಳಿ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಪೊಲೀಸರ ಎದುರಿನಲ್ಲಿಯೇ ಕಿಡಿಗೇಡಿಗಳು ಸಂವಿಧಾನದ ಪ್ರತಿಗಳನ್ನು ಹರಿದು ಹಾಕಿದ್ದಾರೆ, ಈ ಕೃತ್ಯ ನಡೆಸಿದ ಎಲ್ಲರನ್ನೂ 15 ದಿನಗಳ ಒಳಗೆ ಬಂಧಿಸದೇ ಹೋದರೆ ಉತ್ತರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಮತ್ತು ಸಮತಾ ಸೇನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ‘ದೇಶದಲ್ಲಿ ದಲಿತರಿಗೆ ಪದೇ ಪದೇ ಅವಮಾನ ಮಾಡಲಾಗುತ್ತಿದೆ, ಪೊಲೀಸರ ಎದುರಿನಲ್ಲಿಯೇ ಈ ಘಟನೆ ನಡೆದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಂವಿಧಾನ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿಯೂ ದೂರು ದಾಖಲಿಸುತ್ತೇವೆ. ದುಷ್ಕರ್ಮಿಗಳು ಸಂವಿಧಾನದ ಪ್ರತಿಗಳನ್ನು ಸುಟ್ಟಿದ್ದಷ್ಟೇ ಅಲ್ಲದೆ, ಅಂಬೇಡ್ಕರ್‌ ವಿರುದ್ಧ ಘೋಷಣೆಗಳನ್ನು ಕೂಗಿ ಅದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಲಿತರಿಗೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ’ ಎಂದರು.

ದಲಿತ ಸಂಘಟನೆಗಳ ಪ್ರಮುಖರಾದ ಪಿತಾಂಬ್ರಪ್ಪ ಬಿಳಾರ, ಮಾರುತಿ ದೊಡ್ಡಮನಿ, ರವಿಂದ್ರ ಕಲ್ಯಾಣಿ, ದೇವೇಂದ್ರಪ್ಪ ಇಟಗಿ, ಅಶೋಕ ಕಾಶೇನವರ, ಮಂಜಣ್ಣ ಉಳ್ಳಿಕಾಶಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !