ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆಯಿಂದ ವೈನ್‌ ದ್ರಾಕ್ಷಿ ಬೆಳೆಗೆ ಹಾನಿ: ತಗ್ಗಿದ ಇಳುವರಿ

Last Updated 1 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದ್ರಾಕ್ಷಾರಸ ತಯಾರಿಸಲು ಬಳಸುವ ವೈನ್‌ ದ್ರಾಕ್ಷಿಯನ್ನು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದು, ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್‌ ದ್ರಾಕ್ಷಿ ಬೆಳೆದ ರೈತರು ನಿರೀಕ್ಷಿತ ಮಟ್ಟದ ಇಳುವರಿ ಪಡೆಯಲಾಗಲಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಇಳುವರಿ ಕಡಿಮೆ ಆಗಿದೆ. ಆದರೆ, ವೈನ್‌ಗೆ ಬೇಡಿಕೆ ಹೆಚ್ಚಾಗಿರುವ ಕಾರಣ ವೈನ್‌ ದ್ರಾಕ್ಷಿಗೆ ಬೇಡಿಕೆಯು ಹೆಚ್ಚಾಗಿದೆ.

‘ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್‌, ಕಲಬುರ್ಗಿ ಸೇರಿ 900 ಎಕರೆ, ಮೈಸೂರು, ಚಾಮ
ರಾಜನಗರ 150 ಎಕರೆ, ಬೆಂಗಳೂರು (ನಗರ/ಗ್ರಾಮಾಂತರ), ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮ
ನಗರ 750 ಎಕರೆ, ಕೊಪ್ಪಳ, ಬಳ್ಳಾರಿ ಸೇರಿ 200 ಎಕರೆ ಪ್ರದೇಶದಲ್ಲಿ ವೈನ್‌ ದ್ರಾಕ್ಷಿ ಬೆಳೆಯಲಾಗಿದೆ’ ಎಂದು ರಾಜ್ಯ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬೆಂಗಳೂರು (ಗ್ರಾಮಾಂತರ/ನಗರ), ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಟ್ಟು 3,500 ಎಕರೆ ಪ್ರದೇಶದಲ್ಲಿ ಬೆಂಗಳೂರು ನೀಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದ್ದು, ಸುಮಾರು 13,384 ಟನ್‌ನಷ್ಟು ಉತ್ಪಾದನೆಯಾಗಿದೆ. ಇದರಲ್ಲಿ ಶೇ 8ರಿಂದ ಶೇ10ರಷ್ಟು ದ್ರಾಕ್ಷಿಯನ್ನು ವೈನ್‌ಗೆ ಉಪಯೋಗಿಸಲಾಗುತ್ತದೆ. ಈ ಬಾರಿ ಸಾಮಾನ್ಯ ದ್ರಾಕ್ಷಿಗೆ ಕೆ.ಜಿಗೆ ₹ 50–₹60 ದರ ಇದೆ. ಆದರೆ ವೈನ್‌ ದ್ರಾಕ್ಷಿ ಕೆ.ಜಿಗೆ ₹100–₹120ರ ತನಕ ದರ ಸಿಕ್ಕಿದೆ.

ರಾಜ್ಯದಲ್ಲಿ ಒಟ್ಟು 80 ಲಕ್ಷದಿಂದ 90 ಲಕ್ಷ ಲೀಟರ್‌ ವೈನ್‌ ತಯಾರಿಸಲಾಗುತ್ತದೆ. ಕೋವಿಡ್‌ ಲಾಕ್‌ಡೌನ್‌ನಲ್ಲಿ ಶೇ 20ರಷ್ಟು ವೈನ್‌ ಮಾರಾಟವಾಗಿರಲಿಲ್ಲ. ಆನಂತರದಲ್ಲಿ ಮಾರಾಟ ಹೆಚ್ಚಾಗಿದ್ದು, 2019–20ನೇ ಸಾಲಿನಲ್ಲಿ ₹260 ಕೋಟಿ ಆದಾಯ ಬಂದಿದೆ. 2020–21ರಲ್ಲೂ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

ಇಲಾಖೆ ಮಧ್ಯಸ್ಥಿಕೆ ವಹಿಸಲಿ: ‘ವೈನ್‌ ದ್ರಾಕ್ಷಿಗೆ ಬೇಡಿಕೆ ಹೆಚ್ಚಾಗಿದ್ದು, ಇಲಾಖೆ ಸಮಯಕ್ಕೆ ಸರಿಯಾಗಿ ರೈತರಿಗೆ ಉತ್ತಮ ಮಾಹಿತಿ, ಹೊಸ ತಂತ್ರಜ್ಞಾನಗಳ ಬಗೆಗೆ ಮಾಹಿತಿ ನೀಡಬೇಕು. ಬೆಳೆಗಾರರು ಕಂಪನಿಗಳ ಜೊತೆಗೆ ಒಪ್ಪಂದಕ್ಕೆ ಬರುವಾಗ ಇಲಾಖೆ ಮಧ್ಯಸ್ಥಿಕೆ ವಹಿಸಿದ್ದಲ್ಲಿ ರೈತರಿಗೂ ಉತ್ತಮ ಬೆಲೆ ಸಿಕ್ಕಂತಾಗುತ್ತದೆ’ ಎಂದು ಬೆಳಗಾವಿಯ ದ್ರಾಕ್ಷಿ ಬೆಳೆಗಾರ ದಾದಾ ಪಾಟೀಲ ಹೇಳುತ್ತಾರೆ.

ಸರ್ಕಾರ ಮದ್ಯದ ದರ ಹೆಚ್ಚಿಸಿದ್ದರೂ, ವೈನ್‌ ದರದಲ್ಲೇನು ‌ಏರಿಕೆ ಆಗುವುದಿಲ್ಲ. ದರ ಸ್ಥಿರವಾಗಿಯೇ ಇರಲಿದೆ.

ಸರ್ವೇಶ, ಪ್ರಧಾನ ವ್ಯವಸ್ಥಾಪಕ, ದ್ರಾಕ್ಷಾರಸ ಮಂಡಳಿ.

ಪ್ರತಿ ಬಾರಿಯೂ ಕೈಯಲ್ಲಿ ಬೆಳೆ ಇದ್ದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಸರ್ಕಾರ ಅಗತ್ಯ ಕ್ರಮವಹಿಸಬೇಕು. ಆಲಗೊಂಡ ಬಿರಾದಾರ.

ರಾಜ್ಯದಲ್ಲಿ ದ್ರಾಕ್ಷಾರಸ ಮಾರಾಟದ ಅಂಕಿಅಂಶ (ಮಾಹಿತಿ– ರಾಜ್ಯ ಪಾನೀಯ ನಿಗಮ)

ವರ್ಷ; ಮಾರಾಟ(ಲಕ್ಷ ಲೀಟರ್‌ಗಳಲ್ಲಿ); ಒಟ್ಟು ಆದಾಯ (ಕೋಟಿ ರೂಗಳಲ್ಲಿ)

2017–18; 62;224

2018–19;64;253

2019–20;66;260

ಅಂಕಿಅಂಶ

10,000 ಟನ್‌

2018–19ರಲ್ಲಿ ವೈನ್‌ ದ್ರಾಕ್ಷಿ ಇಳುವರಿ

7,000 ಟನ್‌

2019–20ರಲ್ಲಿ ವೈನ್ ದ್ರಾಕ್ಷಿ ಇಳುವರಿ

16

ವೈನ್‌ ದ್ರಾಕ್ಷಿ ಬೆಳೆಯುವ ಜಿಲ್ಲೆಗಳು

2,000 ಎಕರೆ

ಒಟ್ಟು ವಿಸ್ತೀರ್ಣ

15

ರಾಜ್ಯದಲ್ಲಿರುವ ಖಾಸಗಿ ವೈನರಿಗಳ ಸಂಖ್ಯೆ

1,000 (ಅಂದಾಜು)

ವೈನರಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡವರು

(ಮಾಹಿತಿ: ರಾಜ್ಯ ದ್ರಾಕ್ಷಾರಸ ಮಂಡಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT