ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ಪುಣ್ಯಸ್ಮರಣೆ

ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು
Last Updated 1 ನವೆಂಬರ್ 2022, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 38ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಸೇವಾದಳದ ಅಧ್ಯಕ್ಷ ದೊಡ್ಡರಾಮಣ್ಣ ದೊಡ್ಡಮನಿ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಇಂದಿರಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

‘ಹದಿನೈದು ವರ್ಷ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ದೇಶದೊಳಗಿನ ಪ್ರತಿರೋಧಗಳನ್ನು ಮೆಟ್ಟಿ ನಿಂತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಉತ್ತುಂಗ ಸ್ಥಾನಕ್ಕೇರಿಸಿದರು. ಉಕ್ಕಿನ ಮಹಿಳೆಯಾಗಿದ್ದ ಅವರನ್ನು 20ನೇ ಶತಮಾನದ ಧೀರ ಮಹಿಳೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಗಂಗಾಧರ ದೊಡವಾಡ ಒತ್ತಾಯಿಸಿದರು.

‘ಬಡವರ ಪರವಾದ ಅನೇಕ ಯೋಜನೆಗಳನ್ನು ಇಂದಿರಾ ಗಾಂಧಿ ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದರು. ಹಾಗಾಗಿಯೇ, ಕಾಂಗ್ರೆಸ್‌ ಪಕ್ಷವನ್ನು ಇಂದಿಗೂ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಜನರು ನೆನಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಸದಾನಂದ ಡಂಗನವರ, ಶಾಕೀರ ಸನದಿ, ಎಂ.ಎಸ್. ಅಕ್ಕಿ, ಶಿವಾನಂದ ಕರಿಗಾರ, ರಜತ್ ಉಳ್ಳಾಗಡ್ಡಿಮಠ, ನವೀದ್ ಮುಲ್ಲಾ, ಚಂದ್ರಶೇಖರ ಜುಟ್ಟಲ, ಬಸವರಾಜ ಕಿತ್ತೂರ, ಶರೀಫ ಗರಗದ, ರಜೀಯಾ ಬೇಗಂ ಸಂಗೊಳ್ಳಿ, ಡಿ.ಎಂ. ದೊಡ್ಡಮನಿ, ಇಮ್ರಾನ್ ಎಲಿಗಾರ, ಬಸವರಾಜ ಬೆಣಕಲ್, ದಾವಲಸಾಬ ನದಾಫ, ಸರೋಜಾ ಹೂಗಾರ, ರಫೀಕ ದರಗಾದ, ಈರಣ್ಣ ನಾಗಣ್ಣವರ, ಬಾಬಾಜಾನ ಕಾರಡಗಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT