ಭಾನುವಾರ, ಮೇ 22, 2022
21 °C
ಜಿಲ್ಲೆಯ ಎಂಟು ತಂಡಗಳಿಂದ ಹಣಾಹಣಿ, 21ರಂದು ಫೈನಲ್‌ ಪಂದ್ಯ

ಅಂತರ ಕ್ಯಾಂಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಫೆ. 13ರಿಂದ 21ರ ವರೆಗೆ ‘ಪಿಆರ್‌ಎನ್‌ ಟ್ರೋಫಿ’ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ ಆಯೋಜಿಸಿದ್ದು, ಎಂಟು ತಂಡಗಳು ಹಣಾಹಣಿ ನಡೆಸಲಿವೆ. ಮೊದಲ ದಿನ ಬೆಳಿಗ್ಗೆ 8 ಗಂಟೆಗೆ ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಆರ್‌ಐಎಸ್‌) ಮೈದಾನದಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮ್ಮೂದ್‌ ಟೂರ್ನಿಗೆ ಚಾಲನೆ ನೀಡಲಿದ್ದಾರೆ.

ಗುರುವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಸಹಾಯಕ ಕಾರ್ಯದರ್ಶಿ ಡಿ.ಆರ್‌. ಕುಲಕರ್ಣಿ ‘ಪ್ರತಿ ಪಂದ್ಯ ತಲಾ 30 ಓವರ್‌ಗಳಾಗಿದ್ದು, ನಿತ್ಯ ಎರಡು ಪಂದ್ಯಗಳು ಜರುಗಲಿವೆ. ಲೀಗ್‌ ಕಮ್‌ ನಾಕೌಟ್‌ ಮಾದರಿಯಲ್ಲಿ ಟೂರ್ನಿ ನಡೆಯಲಿವೆ. 19 ಮತ್ತು 20ರಂದು ಸೆಮಿಫೈನಲ್‌ ಮತ್ತು 21ರಂದು ಫೈನಲ್‌ ಆಯೋಜಿಸಲಾಗಿದೆ’ ಎಂದು ತಿಳಿಸಿದರು. 

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು ‘ಎ’ ಗುಂಪಿನಲ್ಲಿ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಚಾಂಪಿಯನ್ಸ್‌ ನೆಟ್ ಕ್ರಿಕೆಟ್‌ ಕೋಚಿಂಗ್‌ ಸೆಂಟರ್‌, ಧಾರವಾಡದ ಎಸ್‌ಡಿಎಂ ಅಕಾಡೆಮಿ ಮತ್ತು ವಸಂತ ಮುರ್ಡೇಶ್ವರ ಅಕಾಡೆಮಿ, ‘ಬಿ’ ಗುಂಪಿನಲ್ಲಿ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌, ಹುಬ್ಬಳ್ಳಿ ಕೋಲ್ಟ್ಸ್‌, ತೇಜಲ್‌ ಶಿರಗುಪ್ಪಿ ಅಕಾಡೆಮಿ ಮತ್ತು ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿಗಳು ಭಾಗವಹಿಸಲಿವೆ.

ಲೀಗ್‌ ಹಂತದ ಎಲ್ಲ ಪಂದ್ಯಗಳು ಆರ್‌ಐಎಸ್‌ ಮೈದಾನದಲ್ಲಿ ಜರುಗಲಿವೆ. ನಾಕೌಟ್ ಪಂದ್ಯಗಳನ್ನು ದೇಶಪಾಂಡೆ ನಗರದಲ್ಲಿರುವ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿದೆ. ಕ್ರಿಕ್‌ ಹಿರೋಸ್‌ ಆ್ಯಪ್‌ನಲ್ಲಿ ಪಂದ್ಯದ ಸ್ಕೋರ್‌ಗಳು ಲಭ್ಯವಾಗಲಿವೆ.

ಅಕಾಡೆಮಿಯ ಕಾರ್ಯದರ್ಶಿ ವಿನ್ಸೆಂಟ್‌ ಬಾಬುರಾವ್‌, ಸಲಹೆಗಾರ ವಿಜಯ ಕಾಮತ್‌, ಕೋಚ್‌ ಬಾಬುರಾಯನ್‌, ಕಾರ್ಯಕಾರಿ ಸಮಿತಿ ಸದಸ್ಯ ಪಾಂಡುರಂಗ ನಾಯ್ಡು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು