ಶುಕ್ರವಾರ, ಡಿಸೆಂಬರ್ 6, 2019
21 °C

ಇಸ್ರೇಲ್ ಮಾದರಿ ಕೃಷಿ, ಸಾಮೂಹಿಕ ಕೃಷಿಯತ್ತ ರೈತರ ಮನವೊಲಿಸಬೇಕು: ಶಿವಶಂಕರ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಇಸ್ರೇಲ್ ಮಾದರಿ ಕೃಷಿ, ಸಾಮೂಹಿಕ ಕೃಷಿಯತ್ತ ರೈತರ ಮನವೊಲಿಸಬೇಕಾಗಿದೆ’ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ಧಾರವಾಡದಲ್ಲಿ ಆರಂಭವಾದ ಕೃಷಿ ಮೇಳವನ್ನು ಅಧಿಕೃತವಾಗಿ ಉದ್ಘಾಟಿಸಿದ ಕೃಷಿ ಸಚಿವ ಶಿವ ಶಂಕರರೆಡ್ಡಿ, ‘ಇಸ್ರೇಲ್ ಮಾದರಿ ಅಳವಡಿಸಿಕೊಳ್ಳಲು ನಿಟಿನ ಸದ್ಬಳಕೆ ಮೊದಲು ನಾವು ಅರಿಯಬೇಕು. ಇದರಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ತಗ್ಗಲಿದೆ. ಇಸ್ರೇಲ್ ನಲ್ಲಿ ಸಣ್ಣ ಹಿಡುವಳಿದಾರರು ಸೇರಿ ಸಂಘ ನಿರ್ಮಿಸಿಕೊಂಡಿದ್ದಾರೆ. 2ರಿಂದ 5ಸಾವಿರ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರಿಂದ ಅವರು ಯಶಸ್ವಿ ಆಗಿದ್ದಾರೆ’ ಎಂದರು.

‘ಹೆಸರು ಖರೀದಿಗೆ ಕೇಂದ್ರ ಮುಂದಾಗಿದೆ. ಆದರೆ ರಾಜ್ಯ ಶಿಫಾರಸು ಮಾಡಿದ ಗರಿಷ್ಠ 10 ಕ್ವಿಂಟಾಲ್ ಖರೀದಿಯ ಶಿಫಾರಸು ನಿರಾಕರಿಸಿ 4 ಕ್ವಿಂಟಲ್‌ಗೆ ಸೀಮಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮರು ಪ್ರಸ್ತಾವನೆ ಕಳುಹಿಸಲು ನಿರ್ಧಾರ ಮಾಡಿದ್ದೇವೆ’ ಎಂದು ಸಚಿವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು