ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳಿಗೆ ಹಕ್ಕುಪತ್ರ ವಿತರಣೆ: ಸಿದ್ದರಾಮಯ್ಯ ಹೇಳಿಕೆಗೆ ಶೆಟ್ಟರ್ ತಿರುಗೇಟು

ಅಡುಗೆ ಮಾಡಿದ್ದವರು ಏಕೆ ಬಡಿಸಲಿಲ್ಲ?: ಶಾಸಕ‌ ಜಗದೀಶ ಶೆಟ್ಟರ್
Last Updated 20 ಜನವರಿ 2023, 7:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಬಡಿಸಿದ್ದಾರೆ ಎನ್ನುವ ಕಾಂಗ್ರೆಸ್ ನವರು, ತಾವೇ ಏಕೆ ಬಡಿಸಲಿಲ್ಲ ಎಂದು‌ ಶಾಸಕ‌ ಜಗದೀಶ ಶೆಟ್ಟರ್ ಪ್ರಶ್ನಿಸಿದರು.

ತಾಂಡಾ ನಿವಾಸಿಗಳಿಗೆ ರಾಜ್ಯ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಿದ ಕುರಿತು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ನಗರದಲ್ಲಿ ಶುಕ್ರವಾರ ಅವರು ತಿರುಗೇಟು ನೀಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ 60ಕ್ಕೂ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ನವರು, ಮಾಡಿದ ಅಡುಗೆಯನ್ನು ಯಾಕೆ ಆಗಲೇ ಬಡಿಸಲಿಲ್ಲ ಎಂದರು. ನಾವು ಹಕ್ಕುಪತ್ರ ಕೊಟ್ಟಾಗ ಕಾಂಗ್ರೆಸ್ ನವರಿಗೆ ಜ್ಞಾನೋದಯವಾಗಿದೆ. ಬಂಜಾರ ಸಮುದಾಯವರಿಗೆ ನ್ಯಾಯ ಕೊಡಿಸುವ ಬಿಜೆಪಿ ಕಾರ್ಯಕ್ರಮದ ಯಶಸ್ಸು ನೋಡಿ‌ ಹೊಟ್ಟೆ ಉರಿದಿದೆ. ಅದಕ್ಕಾಗಿ ಈ ರೀತಿ ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಅವರನ್ನು ಹೊರಗಿಡುವ ಕೆಲಸವನ್ನು ಪಕ್ಷ ಮಾಡಿಲ್ಲ. ಹಿಂದೂ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಎಲ್ಲಾ ಜಾತಿ ಮತ್ತು ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗಿ ಎಂದು‌ ಮೋದಿ‌ ಹೇಳಿದ್ದಾರೆ. ಕಾಂಗ್ರೆಸ್ ನವರು ಮುಸ್ಲಿಮರನ್ನು ಮತಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಾರಿಗೂ ಮತಬ್ಯಾಂಕ್ ಆಗಬೇಡಿ ಎಂದು, ವಾಸ್ತವದ ನೆಲೆಯಲ್ಲಿ‌ ನಾವು ಹೇಳುತ್ತಿದ್ದೇವೆ ಎಂದು‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಭಯಪಡುತ್ತಾರೆ ಎಂಬುದು ಈ ವರ್ಷದ ಹೊಸ ಜೋಕ್. ವಿಶ್ವದಲ್ಲೇ ಪ್ರಭಾವಿಯಾದ ಮೋದಿ ಅವರು ಇವರಿಗೆ ಭಯಪಡುವುದುಂಟೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ಅವರನ್ನು ಕಂಡರೆ ಸಣ್ಣ ಹುಡುಗರು ಸಹ ಭಯಪಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT