ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯತೀರ್ಥಾಚಾರ್ಯ ಮಳಗಿ ನಿಧನ

Last Updated 20 ನವೆಂಬರ್ 2022, 18:16 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ವಿದ್ವಾಂಸ, ಪ್ರವಚನಕಾರ ಪಂ. ಡಾ. ಜಯತೀರ್ಥಾಚಾರ್ಯ ಮಳಗಿ (73) ಭಾನುವಾರ ನಿಧನರಾದರು.ಅವರಿಗೆ ಮಗ ಹಾಗೂ ಮಗಳು ಇದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಅವರುವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷ, ಧಾರ್ಮಿಕ ಪತ್ರಿಕೆಗಳ ಸಂಪಾದಕರೂ ಆಗಿದ್ದರು. ಧಾರವಾಡ ನಗರವನ್ನು ಮಾಧ್ವ ಸಿದ್ಧಾಂತದ ಮಹಾಕೇಂದ್ರವನ್ನಾಗಿ ರೂಪಿಸಿದ ಮಹನೀಯರಲ್ಲಿ ಪ್ರಮುಖರಾಗಿದ್ದಾರೆ.

ಶ್ರೀಸತ್ಯಧ್ಯಾನರು, ಶ್ರೀಸತ್ಯಧ್ಯಾನರ ನುಡಿಮುತ್ತುಗಳು, ಕುಲಪತಿ, ಕ್ಷೇಮೇಂದ್ರನ ಸುಭಾಷಿತಗಳು, ಲೇಖನ ತರಂಗಿಣಿ, ಷಟ್ ಪ್ರಶ್ನೋಪನಿಷತ್ತು, ಪ್ರಮೋದ ತರಂಗಿಣಿ, ಸತ್ಯಧ್ಯಾನ ಜೀವನ ರಶ್ಮಿ ಸೇರಿದಂತೆ 40ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.

ಇತ್ತೀಚೆಗೆ ನಡೆದಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನದ
29ನೇ ಅಧಿವೇಶನದ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಮಳಗಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT