ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಘಟಗಿ | ಚಿರತೆ ಬೇಟೆಗೆ ಬೋನು ಅಳವಡಿಕೆ

Published : 18 ಆಗಸ್ಟ್ 2024, 14:23 IST
Last Updated : 18 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments

ಕಲಘಟಗಿ: ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಜಮೀನಿನಲ್ಲಿ ಚಿರತೆ ಬೇಟೆಗಾಗಿ ಅರಣ್ಯ ಇಲಾಖೆಯಿಂದ ಬೋನು ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 

ಮಲಕನಕೊಪ್ಪ ಗ್ರಾಮದ ಹೊರವಲಯದ ಗುಡ್ಡದ ಬಳಿ ರೈತರ ಹೊಲದ ಮನೆಯ ಮುಂದೆ ಕಟ್ಟಿದ ನಾಯಿಯನ್ನ ಗುರುವಾರ ರಾತ್ರಿ ಚಿರತೆಯೊಂದು ತಿಂದು ಹೋದ ಘಟನೆ ನಡೆದಿತ್ತು. 

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಾಯಿ ತಿಂದು ಹಾಕಿದ ಸ್ಥಳದ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಕ್ಯಾಮೆರಾದಲ್ಲಿ ಚಿರತೆ ಸಂಚಾರದ ಗುರುತು ಕಾಣಲಿಲ್ಲ. ಶನಿವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಮದ್ದು ಗುಂಡು ಹಾರಿಸಿ ತೆರಳಿದ್ದರು.

ಶನಿವಾರ ರಾತ್ರಿ ಮತ್ತೆ ಚಿರತೆ ಹೆಜ್ಜೆ ಪತ್ತೆಯಾದ ಮಾಹಿತಿ ತಿಳಿದು ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಅರುಣ ಅಷ್ಟಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ನಂತರ ಬೋನಿನಲ್ಲಿ ನಾಯಿ ಹಾಕಿ ಅದರ ಸುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದರು. 

‘ಚಿರತೆಯೊಂದಿಗೆ 2 ರಿಂದ 3 ಮರಿ ಚಿರತೆಗಳಿವೆ. ಆದ್ದರಿಂದ ಈ ಭಾಗದಲ್ಲಿ ರಾತ್ರಿ ಚಿರತೆ ಓಡಾಡುತ್ತಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ. 

‘ರೈತರು ಹೊಲದ ಮನೆಗಳಲ್ಲಿ ಜಾನುವಾರು ಕಟ್ಟಿಹಾಕಿ ಬರುತ್ತಾರೆ. ಮತ್ತೆ ಜಮೀನಿಗೆ ತೆರಳಲು ರೈತರು ಭಯಪಡುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಕಚರಣೆ ಚುರುಕುಗೊಳಿಸಬೇಕು‘ ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.  

‘ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು ಚಿರತೆ ಸೆರೆಗೆ ಕ್ರಮಕೈಗೊಳ್ಳಲಾಗಿದೆ.  ಗ್ರಾಮಸ್ಥರು ಜಮೀನಿಗೆ ತೆರಳುವಾಗ ಎಚ್ಚರಿಕೆ ವಹಿಸಬೇಕು. ಬೇಗನೆ ಮನೆಗೆ ಬರಬೇಕು‘ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು. 

ಚಿರತೆ ಹೆಜ್ಜೆ ಮೂಡಿದ ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು 
ಚಿರತೆ ಹೆಜ್ಜೆ ಮೂಡಿದ ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT