ಕಲಘಟಗಿ: ರೈತರು ವಿವಿಧ ಬೆಳೆಗಳಿಗೆ ವಿಮಾ ಕಂತು ಪಾವತಿಸಿ ಅಧಿಕೃತ ರಸೀದಿ ಪಡೆದಿದ್ದರೂ ವಿಮೆ ಪರಿಹಾರ ಬಿಡುಗಡೆ ಮಾಡದೆ, ಕೆಲವು ಏಜೆಂಟರು ಆಫ್ಲೈನ್ ಮೂಲಕ ರೈತರಿಂದ ದಾಖಲೆ ಪಡೆದು ವಿಮೆ ಪರಿಹಾರ ಜಮೆ ಮಾಡಿಸುತ್ತಿದ್ದಾರೆಎಂದು ಆರೋಪಿಸಿ ರೈತರು ಕೃಷಿ ಇಲಾಖೆಗೆ ಎಡತಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ 2024–25ನೇ ಸಾಲಿನ ಮುಂಗಾರು ಹಂಗಾಮಿನ ಗೋವಿನ ಜೋಳ, ಸೋಯಾಬೀನ್ ಹಾಗೂ ಇತರೆ ಬೆಳೆಗಳಿಗೆ ನೂರಾರು ರೈತರು ವಿಮೆ ಪಾವತಿಸಿದ್ದು, ಪರಿಹಾರ ಹಣ ಸರಿಯಾಗಿ ಜಮೆ ಆಗಿಲ್ಲ ಎಂಬುದು ರೈತರ ಆರೋಪ.

‘ಹಣ ತುಂಬದೆ ಏಜೆಂಟರು ಕೆಲವು ರೈತರಿಂದ ಜಮೀನಿನ ದಾಖಲೆ ಪಡೆದು ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡಿಸಿ, ಶೇ 50ರಷ್ಟು ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥಗೌಡ್ರ ಬಸನಗೌಡ್ರ ಆಗ್ರಹಿಸಿದರು.

‘ಬೆಳೆ ವಿಮೆ ಹಣ ಪಾವತಿಯಲ್ಲಿ ಏಜೆಂಟರ ಹಾವಳಿ ಹೆಚ್ಚುತ್ತಿದ್ದು, ಅವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ವಿಮಾ ಕಂಪನಿ ಸಿಬ್ಬಂದಿ ಹಾಗೂ ಕೃಷಿ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ’ ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ ಹೇಳಿದರು.

‘ನಾವು ಪ್ರತಿ ವರ್ಷ ಆನ್ಲೈನ್ ಮೂಲಕ ಬೆಳೆ ವಿಮೆ ಕಂತು ಕಟ್ಟುತ್ತೇವೆ. ಆದರೆ ನಮಗೆ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡದೆ ಮೋಸ ಮಾಡುತ್ತಿವೆ. ಏಜೆಂಟರ ಸಹಾಯದಿಂದ ಕಂತು ಪಾವತಿಸಿದವರಿಗೆ ಜಮೆಯಾಗುತ್ತಿದೆ. ಇದರಿಂದ ರೈತರ ನಡುವೆ ತಾರತಮ್ಯ ಉಂಟಾಗುತ್ತಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು’ ಎಂದು ರೈತ ಮುಖಂಡ ಶಂಕರಗೌಡ ಪಾಟೀಲ ಎಚ್ಚರಿಕೆ ನೀಡಿದರು.

‘ವಿಮಾ ಕಂಪನಿಯವರು ಬೆಳೆ ವಿಮೆ ಹಣ ಬಿಡುಗಡೆಗೆ ತಾರತಮ್ಯ ಮಾಡಬಾರದು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಂಡು ರೈತರ ಹಿತ ಕಾಯಬೇಕು’ ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-1887184012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.