ಕಲಘಟಗಿ: ಬೆಳೆ ವಿಮೆ ಹಣ ಬಿಡುಗಡೆಯಲ್ಲಿ ಏಜೆಂಟರ ಹಾವಳಿ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥಗೌಡ್ರ ಬಸನಗೌಡ್ರ ಆರೋಪಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಭಾರತೀಯ ಕಿಸಾನ್ ಸಂಘಟನೆ ಹಾಗೂ ವಿವಿಧ ರೈತ ಸಂಘಟನೆ ಮುಖಂಡರು ಗುರುವಾರ ಆರಂಭಿಸಿದ ಸತ್ಯಾಗ್ರಹದಲ್ಲಿ ಮಾತನಾಡಿದರು.

ರೈತ ಮುಖಂಡ ಶಂಕರಗೌಡ ಪಾಟೀಲ, ಕಲ್ಲಪ್ಪ ಪುಟ್ಟಪ್ಪನವರ ಮಾತನಾಡಿ, ಹಲವು ಬಾರಿ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಗೆ ತೆರಳಿ ವಿಮೆ ಹಣದಲ್ಲಿ ತಾರತಮ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಮುಖಂಡರಾದ ಪರಶುರಾಮ್ ಹುಲಿಹೊಂಡ, ಬಸವರಾಜ ತಿಪ್ಪನವರ, ಶಶಿಧರ ಹುಲಿಕಟ್ಟಿ, ನಾಗಣ್ಣ ಬೆಳ್ಳಿಗಟ್ಟಿ, ಗೋಪಾಲ ದೇವಟೆ, ವಿವೇಕ ಮೋರೆ, ಈಶ್ವರ ಜಾಯನಗೌಡ್ರ, ಬಸವರಾಜ ಕಟ್ಟಿಮನಿ, ಸಿದ್ದಪ್ಪ ಬೆಟಿಗೇರಿ, ಚೆನ್ನಯ್ಯ ಬುಕ್ಕಿಟಗಾರ, ನಿಂಗಯ್ಯ ಕಳ್ಳಿಮನಿ, ಬಸನಗೌಡ ಪಾಟೀಲ, ರಾಮಲಿಂಗ ಕುರುಬರ, ಆನಂದ ದೊಡ್ಮಮನಿ, ಪರಶುರಾಮ ಹುಲಿಹೋಂಡ, ಹನುಮಂತ ಹರಿಜನ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-24-1122991825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.