ಕಲಘಟಗಿ: ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆಯಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಆರೋಪದಡಿ ವಿಮಾ ಕಂಪನಿ ಅಧಿಕಾರಿಗಳು ಸೇರಿದಂತೆ ತಾಲ್ಲೂಕಿನ 10 ಜನರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಭಾರತೀಯ ಕಿಸಾನ್ ಸಂಘ ಹಾಗೂ ವಿವಿಧ ರೈತ ಸಂಘಟನೆ ಬೆಂಬಲದೊಂದಿಗೆ ಬೆಳೆ ವಿಮೆ ತಾರತಮ್ಯ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು ಎಂದು 13 ದಿನಗಳಿಂದ ರೈತರು ನಡೆಸಿದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.

ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಈಗ 10 ಜನರ ಮೇಲೆ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ ಅವರು ಠಾಣೆಗೆ ನೀಡಿದ ದೂರು ಆಧರಿಸಿ ವಿಮಾ ಕಂಪನಿಯ ಬೆಂಗಳೂರಿನ ಶ್ರೀನಿವಾಸ್ ಹಾಗೂ ಕಲಘಟಗಿ ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದ ಬಸಪ್ಪ ಕುರಟ್ಟಿ, ತಾವರಗೇರಿ ಗ್ರಾಮದ ಪ್ರಕಾಶ ತಿಪ್ಪಣ್ಣವರ, ಬಸವರಾಜ ವಾಲಿಕಾರ, ಶಂಕ್ರಪ್ಪ ತಿಪ್ಪಣ್ಣವರ, ಮಂಜುನಾಥ ಬಡಿಗೇರ, ಮಣಿಕಂಠ ನಾಯರ, ಯಲವದಾಳ ಗ್ರಾಮದ ಬಸಯ್ಯ ಹಿರೇಮಠ, ಬೆಂಡಲಗಟ್ಟಿ ಗ್ರಾಮದ ಮಂಜುನಾಥ ಹಾನಗಲ್ಲ, ಬೆಲವಂತರ ಗ್ರಾಮದ ಬಸಯ್ಯ ಹಿರೇಮಠ ಎಂಬುವವರು ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ಇವರು ಬೆಳೆ ವಿಮೆಯಡಿ ಅನುಚಿತ ಬೆಳೆಗಳನ್ನು ರೈತರು ಜಮೀನಿನಲ್ಲಿ ಬೆಳೆಯದೇ ಹಾಗೂ ವಿಮಾ ಕಂತು ತುಂಬಿದ ಕ್ಷೇತ್ರಕ್ಕಿಂತ ಕಡಿಮೆ ಪ್ರದೇಶದಲ್ಲಿ ಬೆಳೆ ಬೆಳೆದರೂ ಬೆಳೆ ಸಮೀಕ್ಷೆ ಯೋಜನೆಯಡಿ ತಪ್ಪು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನಲ್ಲಿ 2025-26ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡಿದ ವಿಮಾಕಂತು ₹9,39,68,220 ದುರುಪಯೋಗ ಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ರೈತರು ಬೆಳೆ ವಿಮೆ ತಾರತಮ್ಯದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕೈವಾಡವಿದ್ದು ಅವರ ಮೇಲೆ ಪ್ರಕರಣ ದಾಖಲಿಸಿದರೆ ಧರಣಿ ವಾಪಾಸ ಪಡೆಯಲಾಗುವುದು ಎಂದು ಪಟ್ಟು ಹಿಡಿದರು.

ತಹಶೀಲ್ದಾರ್ ಬಸವರಾಜ ಹೊಂಕಣವರ, ಸಿಪಿಐ ಶ್ರೀಶೈಲ್ ಕೌಜಲಗಿ, ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ ಸಮ್ಮುಖದಲ್ಲಿ ಎರಡು ಗಂಟೆಗಳ ಕಾಲ ವಾಗ್ವಾದ ನಡೆಯಿತು.

ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಭಾರತೀಯ ಕಿಸಾನ್ ಸಂಘಟನೆ ನಡೆಸುತ್ತಿದ್ದ ರೈತರ ಧರಣಿ ಹಿಂಪಡೆದುಕೊಂಡಿದ್ದಾರೆ.

ಭಾರತೀಯ ಕಿಸಾನ್ ಸಂಘದ ರಾಜ್ಯ ಅಧ್ಯಕ್ಷ ಭೀಮಸೇನ್ ಕೊಕರೇ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂತ ರೈತ ಸಂಘದ ಅಧ್ಯಕ್ಷ ವಿವೇಕ ಮೋರೆ, ರಮೇಶ್ ಕೊರವಿ, ಜಿಲ್ಲಾಧ್ಯಕ್ಷ ಗುರುನಾಥಗೌಡ ಬಸನಗೌಡ್ರ, ಉಪಾಧ್ಯಕ್ಷ ರುದ್ರಗೌಡ ಪಾಟೀಲ, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಶಂಕರಗೌಡ ಪಾಟೀಲ, ಶಶಿಧರ್ ಹುಲಿಕಟ್ಟಿ, ಕಲ್ಲಪ್ಪ ಪುಟ್ಟಪ್ಪನವರ, ಪರಶುರಾಮ ಹುಲಿಹೊಂಡ, ಬಸವರಾಜ್ ಕಟ್ಟಿಮನಿ ನಾಗೇಶ ಇಟಗಿ ಇನ್ನಿತರ ರೈತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-24-267386951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.