ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ತಡರಾತ್ರಿ ಗುಡುಗು ಸಹಿತ ಧಾರಾಕಾರ ಸುರಿದ ಗಾಳಿಮಳೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿ ಹಾನಿ ಸಂಭವಿಸಿದ ಘಟನೆ ಜರುಗಿದೆ.

ಪಟ್ಟಣದ ಎಂಟ್ ಬಂಡಿ ಪ್ಲಾಟಿನ ನಿವಾಸಿ ಬಸವರಾಜ ಕಾರಿ ಅವರ ಮನೆ ಮೇಲೆ ಬೃಹತಾಕಾರದ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದು ಮೇಲ್ಚಾವಣಿ ತಗಡುಗಳು ಮುರಿದಿವೆ. ಇದರಿಂದ ₹40 ರಿಂದ ₹50 ಸಾವಿರ ಮೊತ್ತದಷ್ಟು ಆಸ್ತಿ ಹಾನಿ ಸಂಭವಿಸಿದೆ. ಅದೃಷ್ಟವಶಾತ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಮನೆಯವರು ಅಳಲು ತೋಡಿಕೊಂಡರು.

ಪಟ್ಟಣದ ನಿವಾಸಿ ಶಂಭು ಬಳಗೇರ ಎಂಬುವರಿಗೆ ಸೇರಿದ ಜಮೀನಿನಲ್ಲಿರುವ ಬತ್ತದ ಬಣಿವೆಯು ಗಾಳಿ ರಭಸಕ್ಕೆ ಚದುರಿ ಹೋಗಿರುವುದಲ್ಲದೆ ಮನೆಯ ತಗಡು ಗೋಡೆ ಕುಸಿದು ಬಿದ್ದು ಜಖಂಗೊಂಡಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಪಟ್ಟಣದ ಬಸವೇಶ್ವರ ನಗರದ ಮನೆಗೆ ಹಾಗೂ ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆ ಚರಂಡಿ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿತು. ತಾಲ್ಲೂಕಿನ ಜಿನ್ನೂರ ಗ್ರಾಮದ ಯಲ್ಲಪ್ಪ ಬೆಟದೂರ ಅವರ ಜಮೀನಿನಲ್ಲಿ ಜಾನುವಾರಗಳಿಗೆ ಸಂಗ್ರಹಿಸಿಟ್ಟಿದ್ದ ಹೊಟ್ಟಿನ ಮೇವಿನ ಬಣವಿಗೆ ಏಕಾಏಕಿ ಸಿಡಿಲು ಬಡೆದು ಸಂಪೂರ್ಣ ಸುಟ್ಟುಹೋಗಿದೆ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಮಂಗಳವಾರ ಸುರಿದ ಬಾರಿ ಮಳೆಗೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೂಡಾ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬುಧವಾರ ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬ ದುರಸ್ತಿ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಮರ ತೆರವುಗೊಳಿಸಿದರು. ಪಟ್ಟಣ ಪಂಚಾಯತಿಯಿಂದ ಶಾಲೆಯ ಆಟದ ಮೈದಾನಕ್ಕೆ ನುಗ್ಗಿದ ನೀರು ತೆಗೆದು ಶಾಲೆಗೆ ಅನುವು ಮಾಡಿಕೊಟ್ಟಿದ್ದಾರೆ.

ಹಾನಿಯಾದ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಸೂಕ್ತ ಪರಿಹಾರ ನೀಡುವಂತೆ ಹಾನಿಗೊಳಗಾದ ಮನೆಯವರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-24-1825301316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.