ಕಲಘಟಗಿ: ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಗ್ರಾಮದ ಪ್ರತಿ ಜಮೀನಿಗೆ ಭೇಟಿ ನೀಡಿ ಶೀಘ್ರವಾಗಿ ಹಾನಿಯ ವರದಿ ಸಿದ್ಧಪಡಿಸಿ ರೈತರಿಗೆ ವಿಳಂಬವಾಗದೆ ಪರಿಹಾರ ನೀಡಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಮಾಚಾಪುರ ಗ್ರಾಮದಲ್ಲಿ ಮಾರ್ಚ್ 17ರಂದು ಸುರಿದ ಆಲಿಕಲ್ಲು ಮಳೆಯಿಂದ ಹಾನಿಯಾದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

‘ನಮ್ಮ ಫೌಂಡೇಶನ್ನಿಂದ ಈಗಾಗಲೇ 50 ಸಾವಿರ ಚಾವಣಿಯ ಹೆಂಚು ವಿತರಿಸಲಾಗಿದೆ’ ಎಂದರು. ಜಾನುವಾರು ಕಳೆದುಕೊಂಡಿದ್ದ ಕಲ್ಲಪ್ಪ ಬಸವಂತಪ್ಪ ಹುರಕಡ್ಲಿ, ನಿಂಗಪ್ಪ ತಿಪ್ಪಣ್ಣ ರಾಮನಕೊಪ್ಪ, ನಾಗಪ್ಪ ಫಕ್ಕೀರಪ್ಪ ಇಂದೂರ ಅವರಿಗೆ ಜಿಲ್ಲಾಡಳಿತದಿಂದ ₹20 ಸಾವಿರ ಪರಿಹಾರ ಧನದ ಚೆಕ್ ವಿತರಿಸಿದರು. ಬೆಳೆ ಹಾನಿಯಾದ ರೈತ ಸಂತೋಜಿ ಹುಲಿಹೋಂಡ ಅವರ ಜಮೀನಿಗೆ ಭೇಟಿ ನೀಡಿ, ಕಬ್ಬು, ಗೋವಿನಜೋಳ ಮತ್ತು ಮಾವು ಬೆಳೆ ಹಾನಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಉಪವಿಭಾಗಾದಿಕಾರಿ ಶಾಲಂ ಹುಸೇನ್, ತಹಶೀಲ್ದಾರ್ ಬಸವರಾಜ ಹೊಂಕಣದವರ, ತಾಲ್ಲೂಕು ಪಂಚಾಯತಿ ಇಒ ಪಿ.ವೈಸಾವಂತ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಶ್ರೀದೇವಿ ಎ. ಎಸ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-24-1924607165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.