ಕಲಘಟಗಿ: ‘ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಿ, ಅಗತ್ಯಬಿದ್ದರೆ ಟ್ಯಾಂಕರ್ ನೀರು ಪೂರೈಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು ಪಿಡಿಒ ಹಾಗೂ ಆಡಳಿತಾಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನೀರಿನ ಶುದ್ಧತೆಯ ಬಗ್ಗೆ ಗಮನಹರಿಸಬೇಕು. ಬೇಸಿಗೆ ಕಾಲ ಇರುವುದರಿಂದ ಮಿತವಾಗಿ ನೀರು ಬಳಸಲು ತಿಳಿವಳಿಕೆ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಎಲ್ಲರೂ ತುರ್ತಾಗಿ ಫೇಸ್ ಅಥೆಂಟಿಕೇಶನ್ ಪೂರ್ಣಗೊಳಿಸಿ, ಕೂಲಿ ಕಾರ್ಮಿಕರ ಜಾಬ್ ಕಾರ್ಡ್ಇ–ಕೆವೈಸಿ ಚುರುಕುಗೊಳಿಸಬೇಕು.ಒಂಬುಡ್ಸ್ಮನ್ ರಿಕವರಿಸಮರ್ಪಕವಾಗಿ ಆಗಬೇಕು. ಪ್ರತಿ ತಿಂಗಳು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸಭೆ ನಡೆಸಬೇಕು’ ಎಂದು ಸೂಚಿಸಿದರು.

‘ತಾಲ್ಲೂಕಿನ ಬೀರವಳ್ಳಿ,ತಾವರಗೇರಿ, ಸೂರಶೆಟ್ಟಿಕೊಪ್ಪ ಇನ್ನಿತರ ಗ್ರಾಮದಲ್ಲಿ ಕುಡಿಯುವ ನೀರಿದ್ದರೂ, ವಿದ್ಯುತ್ ವ್ಯತ್ಯಯದಿಂದಾಗಿ ಪೂರೈಕೆಗೆ ಸಮಸ್ಯೆ ಆಗುತ್ತಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯ ಗಮನ ಸೆಳೆದರು.

ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 2025-26ರ ತೆರಿಗೆ ವಸೂಲಾತಿ ಹಾಗೂ ಶೇ 100ರಷ್ಟು ಮಾನವ ದಿನಗಳ ಗುರಿ ಸಾಧಿಸಿ ಉತ್ತಮ ಕೆಲಸ ನಿರ್ವಹಿಸಿದ ಪಿಡಿಒ, ಸಿಬ್ಬಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಒಪರಶುರಾಮ ಸಾವಂತ, ಅಧಿಕಾರಿಗಳಾದ ಗಿರೀಶ ಕೋರಿ, ಸಂತೋಷ ಸತಾಳಿ, ಸುರೇಶ ಗುರನ್ನವರ, ಶಿವಪ್ಪ ಸಣ್ಣಮನಿ, ಕೃಷಿ ಅಧಿಕಾರಿ ಅಮರ ನಾಯ್ಕರ, ತೋಟಗಾರಿಕಾ ಅಧಿಕಾರಿ ಶ್ರೀದೇವಿ ಎ.ಎಸ್., ಸಮಾಜ ಕಲ್ಯಾಣ ಅಧಿಕಾರಿ ಅನುಷಾ ಹಿರೇಮಠ, ಗಾಯತ್ರಿ ಸಜ್ಜನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-173608680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.