ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಘಟಗಿ: ಮೀಟರ್ ಬಡ್ಡಿ ಕಿರುಕುಳ– ಯುವಕ ಆತ್ಮಹತ್ಯೆ

Published : 25 ಸೆಪ್ಟೆಂಬರ್ 2024, 15:42 IST
Last Updated : 25 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಕಲಘಟಗಿ: ತಾಲ್ಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಸಾಲದ ಮೀಟರ್ ಬಡ್ಡಿ ಕಿರುಕುಳಕ್ಕೆ ಮನನೊಂದು ಯುವಕ ಸದ್ದಾಂ ಕಟ್ನೂರ (23) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

‘ಗ್ರಾಮದಲ್ಲಿ ಮೀಟರ್ ಬಡ್ಡಿ, ಬ್ಯಾಂಕ್‌, ಸಂಘ ಹಾಗೂ ವಿವಿಧ ಕಡೆಯಿಂದ ಮನೆ ಕಟ್ಟಲು ಸಾಲ ಮಾಡಿಕೊಂಡಿದ್ದರು. ಪ್ರತಿ ವಾರ, ತಿಂಗಳಿಗೊಮ್ಮೆ ಬಡ್ಡಿ ಕಟ್ಟುತ್ತಿದ್ದರು. ಒಂದು ದಿನ ತಡವಾದರೂ ಸಾಲಗಾರರು ಮನೆಗೆ ಬಂದು, ದೂರವಾಣಿ ಕರೆ ಮಾಡಿ ನಿರಂತರ ಕಿರುಕುಳ ನೀಡುತ್ತಾ ಅವ್ಯಾಚವಾಗಿ ನಿಂದಿಸುತ್ತಿದ್ದರು. ಅದಕ್ಕೆ ನಮ್ಮ ಪತಿ ನೇಣು ಹಾಕಿಕೊಂಡಿದ್ದಾರೆ‘ ಎಂದು ಮೃತ ಯುವಕನ ಪತ್ನಿ ಪೊಲೀಸ್ ಠಾಣೆ ಮುಂದೆ ಬಂದು ಅಳಲು ತೋಡಿಕೊಂಡರು.

ಸಾಲಗಾರರು ಬಡ್ಡಿ ತುಂಬಲು ಸಮಯ ಕೊಡದ್ದಿದ್ದಾಗ ಬಡ್ಡಿ ಹಣ ಹೆಚ್ಚಾಗಿ ಕಿರುಕುಳಕ್ಕೆ ಬೇಸತ್ತು ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿದ್ದರು. ನಂತರ ಅವರ ಸಾವಿನ ಸುದ್ದಿ ಬಂದಿದೆ. ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.  

ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT