ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೌಗಿ ನಾಲಾ ಸೇರಿದ ಕಾಳಿ ನದಿ ನೀರು

Last Updated 5 ಏಪ್ರಿಲ್ 2022, 6:02 IST
ಅಕ್ಷರ ಗಾತ್ರ

ಅಳ್ನಾವರ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಕಾಳಿ ನದಿಯಿಂದ ನೀರು ತರುವ ಯೋಜನೆಯ ಪ್ರಥಮ ಪ್ರಾಯೋಗಿಕ ಹಂತ ಯಶಸ್ವಿಯಾಗಿದೆ.

ದಾಂಡೇಲಿಯಿಂದ ಸುಮಾರು 36 ಕಿ.ಮೀ. ದೂರದ ಅಳ್ನಾವರ ಪಟ್ಟಣಕ್ಕೆ ಸೋಮವಾರ ಸಂಜೆ 7.40ಕ್ಕೆ ಸರಿಯಾಗಿ ಪೈಪ್‌ಲೈನ್‌ ಮೂಲಕ ನೀರು ಡೌಗಿ ನಾಲಾ ಒಡಲು ಸೇರಿತು. ಇದರಿಂದ ಜನರಲ್ಲಿ ಸಂತಸ ಮೂಡಿದೆ.

ಒಂದು ವಾರದ ಹಿಂದೆ ನೀರು ಜಾವಳ್ಳಿಗೆ ಬರಬೇಕಿತ್ತು. ಆದರೆ ತಾಂತ್ರಿಕ ದೋಷ ಉಂಟಾಗಿತ್ತು. ಸ್ಥಳದಲ್ಲಿಯೇ ಬೀಡುಬಿಟ್ಟ ಧಾರವಾಡ ಜಲ ಮಂಡಳಿಯ ಅಧಿಕಾರಿ ರವಿಕುಮಾರ ಹಾಗೂ ಎಂಜಿನಿಯರ್ ಕಿರಣ ಮಾಸ್ತಿ ಅವರು ದೋಷ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟಾಕಿ ಸಂಭ್ರಮ: ಕಾಳಿ ನದಿ ನೀರು ಹೋರಾಟ ಸಮಿತಿ ಸದಸ್ಯರು ಮುಖ್ಯ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT