ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿಯಲ್ಲಿ ಮಾಳವಿಕಾ ಭಾಷಣಕ್ಕೆ ಸಭಿಕರ ಆಕ್ಷೇಪ

Last Updated 5 ಜನವರಿ 2019, 9:01 IST
ಅಕ್ಷರ ಗಾತ್ರ

ಧಾರವಾಡ:ಸಮ್ಮೇಳನದಲ್ಲಿ ನಡೆಯುತ್ತಿರುವ ಗೋಷ್ಠಿಯಲ್ಲಿ ನಟಿಮಾಳವಿಕಾ ಅವಿನಾಶ್‌ ಅವರ ಭಾಷಣಕ್ಕೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಮಾಳವಿಕಾ ಮಾತನಾಡಿದರು.
ಗೋಷ್ಠಿಯಲ್ಲಿ ಮಾಳವಿಕಾ ಮಾತನಾಡಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ 4ರಲ್ಲಿ ವೈಚಾರಿಕತೆ ಮತ್ತು ಅಸಹಿಷ್ಣುತೆವಿಷಯ ಮಂಡನೆಯಲ್ಲಿ ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾಳವಿಕಾ ಮಾತನಾಡುತ್ತಿದ್ದಾಗ ಸಭಿಕರು ಆಕ್ಷೇಪ

ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದರು.

ಮಾತಾಡಲು ಬಿಡದವರ ಅಸಹಿಷ್ಣುತೆ ಪ್ರತಿಭಟಿಸಿ ಮಾತು ಮಾಳವಿಕಾ ಮೊಟಕುಗೊಳಿಸಿದರು.

ಕೆಲವು ಸಭಿಕರ ಒತ್ತಾಯಕ್ಕೆ ಮಣಿದು, ಸಹಿಷ್ಣುವಾಗಿ ಮಾತು ಆರಂಭಿಸುತ್ತೇನೆ ಎಂದು ಮಾಳವಿಕಾ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಿಚಾರ ಮಂಡಿಸಲು ಅವಕಾಶವಿದೆ. ಆದರೆ ಅದಕ್ಕೆ ಸಕಾರಣ ಇರಬೇಕಷ್ಟೆ. ಅದಕ್ಕೆ ರಾಷ್ಟ್ರ ಚಿಂತನೆ ಇರಬೇಕು ಎಂದರು.

ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾತನಾಡಿದ ಮಾಳವಿಕಾ, ಪರಮೇಶ್ ಮೆಸ್ತ, ರುದ್ರೇಶ್, ಶರತ್ ಕೊಲೆ ಪ್ರಸ್ತಾಪಿಸಿ ಇದು ಅಸಹಿಷ್ಣುತೆ ಅಲ್ಲವೇ. ಸನಾತನ ಧರ್ಮ ನಿರಂತರ ಇಂತಹ ದಾಳಿಗೆ ತುತ್ತಾಗಿದ್ದರೂ, ಅದು 5 ಸಾವಿರ ವರ್ಷಗಳಿಂದ ಸಹಜ ಸಹಿಷ್ಣುತೆ ಕಾಪಾಡಿಕೊಂಡಿದೆ ಎಂದು ಪ್ರತಿಪಾದಿಸಿದರು.

ಮಾಳವಿಕಾ ಅವರ ಮಾತಿಗ ಸಭಿಕರು ಆಕ್ಷೇಪಿದರು.
ಮಾಳವಿಕಾ ಅವರ ಮಾತಿಗ ಸಭಿಕರು ಆಕ್ಷೇಪಿದರು.

ಅಸಹಿಷ್ಣುತೆ ಮತ್ತು ಲಿಂಚಿಂಗ್ ಎಂಬ ಪದ ಹುಡುಕಿದ ಬುದ್ಧಿವಂತರಿಗೆ, ಸಿಕ್ಕ್‌ ನರಮೇಧ, 2005ರಿಂದ 09ರವರೆಗೆ ಅಸಹಿಷ್ಣುತೆಗೆ 530 ಬಲಿಯಾಗಿದ್ದಾರೆ ಎಂಬುದು ಅರ್ಥವಾಗಲಿಲ್ಲವೇ? ಆ ಕಾಲಘಟ್ಟದಲ್ಲಿ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಕಳೆದ 60 ವರ್ಷದಲ್ಲಿ 102 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನೇ ಪುನರ್‌ ಪ್ರಶ್ನಿಸಲು ನಮ್ಮಲ್ಲಿ ಅವಕಾಶವಿದೆ. ಇದು ಈ ದೇಶದ ಸಹಿಷ್ಣುತೆ ಎಂದು ಮಾಳವಿಕಾ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT