ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಶೌರ್ಯ, ಸಾಹಸ ಸ್ಮರಣೆ

ನಗರದ ವಿವಿಧೆಡೆ ಕಾರ್ಗಿಲ್‌ ವಿಜಯ ದಿನ ಆಚರಣೆ
Last Updated 27 ಜುಲೈ 2022, 4:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧ ಶಾಲೆ, ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಲ್ಲಿ ಮಂಗಳವಾರ ಕಾರ್ಗಿಲ್‌ ವಿಜಯ ದಿನವನ್ನು ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಯೋಧರ ಶೌರ್ಯ, ದೇಶಪ್ರೇಮ ಹಾಗೂ ಶ್ರದ್ಧೆಯನ್ನು ಸ್ಮರಿಸಲಾಯಿತು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಅಕ್ಷಯ್ ಗಿರೀಶ್ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿಲೆಫ್ಟಿನೆಂಟ್ ಜನರಲ್ ಎಸ್. ಸಿ.ಸರದೇಶಪಾಂಡೆ ಮಾತನಾಡಿ,ಆಧುನಿಕ ಯುಗದ ಯುದ್ಧದ ಸವಾಲುಗಳು ವಿಭಿನ್ನವಾಗಿದ್ದು, ಸೇನೆ ಸೇರ ಬಯಸುವ ಯುವಕರು ದೇಶಪ್ರೇಮದ ಜತೆಗೆ ತಂತ್ರಜ್ಞಾನ ನೈಪುಣ್ಯತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರೂಪ್ ಕ್ಯಾಪ್ಟನ್ ಅಶ್ವಿನಿಕುಮಾರ್ ಮಂಡೋಹೋತ, ವಿಂಗ್ ಕಮಾಂಡರ್ ಗಿರೀಶ್ ಕುಮಾರ್, ಮೇಘನಾ ಗಿರೀಶ್ ಮಾತನಾಡಿದರು. ಮೇಜರ್ ಜನರಲ್ ಇಯಾನ್ ಕಾರ್ಡೋಜೊ ಕಾರ್ಗಿಲ್ ಯುದ್ಧ ಕುರಿತು ರಚಿಸಿದ ಕವನ ವಾಚನ ಮಾಡಿದರು. ಕೆ.ಎಲ್.ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.

ಹುತಾತ್ಮ ಮೇಜರ್ ಪದ್ಮಪಾಣೆ ಆಚಾರ್ಯ ಅವರ ಪತ್ನಿ ಚಾರುಲತಾ ಆಚಾರ್ಯ, ಸುಬೇದಾರ್ ವೀರಪ್ಪ ಬಿಂಗಿ, ಗ್ರೂಪ್ ಕ್ಯಾಪ್ಟನ್ ಆಶ್ವಿನಿಕುಮಾರ ಮಂಡೋಹೋತ ಹಾಗೂ ಲೆಫ್ಟಿನೆಂಟ್ ಕರ್ನಲ್ ಪಿ.ಎಸ್.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಕಣಬರಗಿಮಠ, ಡೀನ್‌ಗಳಾದ ಡಾ.ಪ್ರಕಾಶ್ ತೇವರಿ, ಪ್ರೊ.ಬಿ.ಎಲ್.ದೇಸಾಯಿ, ಡಾ.ಸಂಜಯ ಕೊಟಬಾಗಿ, ಪ್ರೊ.ಶಿವರಾಜ್ ಹುಬಳೀಕರ್ ಇದ್ದರು.

ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವಲಯ ಮತ್ತುಬೆಳಗಾವಿ ಮರಾಠಾ ಲಘುಪದಾತಿದಳ ವತಿಯಿಂದ ಅಣ್ಣಿಗೇರಿಯ ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು.

ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ ಡಾ.ಎಸ್‌.ಎಂ.ದೇವರಾಜ, ಸುಬೇದಾರ್ ಮೇಜರ್ ಸುರೇಶ್ ಭಾರ್ಗಲಿ, ನೈಬ್ ಸುಬೇದಾರ್‌ ನಾಗರಾಜ್‌ ತಿಳಗಂಜಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯೆ ಡಾ.ವಿದ್ಯಾ ಹಡಗಲಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗಜಾನನ ಮಹಾಮಂಡಳದಿಂದ ರ‍್ಯಾಲಿ

ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ಗಜಾನನ ಮಹಾಮಂಡಳದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ರ‍್ಯಾಲಿ ನಡೆಸಲಾಯಿತು.

ಲ್ಯಾಮಿಂಗ್ಟನ್ ಶಾಲೆ ಎದುರು ಮುಖಂಡ ಡಾ.ವಿ.ಎಸ್.ವಿ. ಪ್ರಸಾದ ಅವರರು ರ‍್ಯಾಲಿಗೆ ಚಾಲನೆ ನೀಡಿದರು. ಜೆ.ಜಿ. ಮಹಿಳಾ ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಅಂಗಡಿ, ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ಮಾತನಾಡಿದರು.

ಮಹಾಮಂಡಳದ ಉಪಾಧ್ಯಕ್ಷ ಲಿಂಗಪ್ಪ ಮೊರಬದ, ಎಸ್‍ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಡಾ.ಶಿವಲೀಲಾ ವೈಜನಾಥ, ಡಾ.ನಾಯ್ಡು ಎಚ್., ಲ್ಯಾಮಿಂಗ್ಟನ್ ಬಾಲಕ-ಬಾಲಕಿಯರ ಪ್ರೌಢಶಾಲೆಯ ಜ್ಯೋತಿ ಪಾಟೀಲ, ಅನ್ನಪೂರ್ಣಾ ಕಟಗೇರಿ, ಬಿ.ಜಿ.ಕರಿಗಾರ, ಜಿ.ಬಿ. ಬೊದನೂರ, ಮಹಾಮಂಡಳದ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT