ಭಾನುವಾರ, ಸೆಪ್ಟೆಂಬರ್ 26, 2021
25 °C

ಹುಬ್ಬಳ್ಳಿ: 520 ಮತದಾರರ ಹೆಸರು ಸ್ಥಳಾಂತರ; ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗದಗ ರಸ್ತೆಯ ಪೀಟರ್ ಪ್ರೌಢಶಾಲೆಯಲ್ಲಿ ತೆರೆಯಲಾದ ವಾರ್ಡ್ ನಂ. 61ರ ಮೂರನೇ ಮತಗಟ್ಟೆಯಲ್ಲಿನ 520 ಮಂದಿಯ ಹೆಸರನ್ನು ಅಳಿಸಲಾಗಿದೆ ಎಂದು ಆರೋಪಿಸಿ ರೈಲ್ವೆ ಕ್ವಾಟ್ರಸ್ ಹಾಗೂ ವಿದ್ಯಾರಣ್ಯನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮತಗಟ್ಟೆಯಲ್ಲಿ 1,500 ಮತದಾರರ ಹೆಸರು ಇದ್ದು, ಅರ್ಧದಷ್ಟು ಮಂದಿ ಹೆಸರನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ, ಯಾವ ಮತಗಟ್ಟೆಗೆ ಸ್ಥಳಾಂತರ ಎಂದು ತಿಳಿಸಿಲ್ಲ. ಉದ್ದೇಶ ಪೂರ್ವಕವಾಗಿ ಹೀಗೆ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ನಾಗೇಶ ಆಕವಿಟಿ ಆಕ್ರೋಶ ವ್ಯಕ್ತಪಡಿಸಿದರು.

ಮೃತಪಟ್ಟವರ 20ಕ್ಕೂ ಹೆಚ್ಚು ಹೆಸರನ್ನು ಮತದಾರರ ಪಟ್ಟಿಯಲ್ಲಿ‌ಸೇರಿಸಲಾಗಿದೆ. ಪತಿ ಹೆಸರು ಇದ್ದರೆ ಪತ್ನಿ ಹೆಸರು ಇಲ್ಲ. 25 ವರ್ಷಗಳಿಂದ ಒಂದೇ ಕಡೆ ವಾಸಿಸುತ್ತಿದ್ದವರ ಹೆಸರನ್ನು ಸಹ ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿದರು.

ಅಲ್ಪ ಸಂಖ್ಯಾತರ ಹಾಗೂ ಸ್ಲಂ ಪ್ರದೇಶದ ಬಹುತೇಕ ಮತಗಟ್ಟೆಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್'ನ ಹೆಚ್ಚು ಮತಗಳಿರುವಲ್ಲಿಯೇ ಇಂತಹ ಗೊಂದಲ ಏರ್ಪಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಆಯುಕ್ತ ಸುರೇಶ ಇಟ್ನಾಳ್, ಸ್ಥಳೀಯರ ಜೊತೆ ಚರ್ಚಿಸಿದರು. ನಂತರ ವಿದ್ಯಾರಣ್ಯನಗರ ಪ್ರದೇಶಕ್ಕೆ ಭೇಟಿ ನೀಡಿ, ಮನೆಸ್ಥಳಾಂತರಗೊಂಡ ಮನೆಗಳನ್ನು ಪರಿಶೀಲಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿರುವುದಾದರೆ ಸರಿಪಡಿಸುವುದಾಗಿ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು