ಹುಬ್ಬಳ್ಳಿ: ಶಿಕ್ಷಕರು ಮತ್ತು ಸಿಬ್ಬಂದಿಯ ಹಾಜರಾತಿಗೆ ಜೂನ್ 1ರಿಂದ ಜಾರಿಗೆ ತರಲಾದ ಕರ್ತವ್ಯ–ಕೆಎಎಎಂಎಸ್ (ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಅಪ್ಲಿಕೇಷನ್ನಲ್ಲಿ ನೋಂದಣಿ ಮಾಡಿಕೊಳ್ಳದ ಹಾಗೂ ಹಾಜರಿ ಹಾಕದ ಧಾರವಾಡ ವಿಭಾಗದ 17,685 ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು, ಜಿಲ್ಲಾ ಉಪನಿರ್ದೇಶಕರ ಮೂಲಕ ಸೋಮವಾರ ನೋಟಿಸ್ ನೀಡಿದ್ದು, ಐದು ದಿನದ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, ವಿಜಯಪುರ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಅಡಿ ಒಟ್ಟು 53,416 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಜರಾತಿ ಗುರುತಿಸಲು ಕರ್ತವ್ಯ ಸ್ಥಳದಿಂದಲೇ ಪ್ರತಿ ದಿನ ಎರಡು ಬಾರಿ ಅಪ್ಲಿಕೇಷನ್ ಮುಖಾಂತರ ಕಡ್ಡಾಯವಾಗಿ ಹಾಜರಿ ಹಾಕುವಂತೆ ತಿಳಿಸಲಾಗಿದೆ. ಡಿಜಿಟಲ್ ಆಡಳಿತ, ಪಾರದರ್ಶಕತೆ, ಆಡಳಿತಾತ್ಮಕ ದಕ್ಷತೆ ಉದ್ದೇಶಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಈ ಬಗ್ಗೆ ಉದಾಸೀನ ತೋರಿದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

‘49,579 ಸಿಬ್ಬಂದಿ ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನ 35,731 ಸಿಬ್ಬಂದಿ ಹಾಜರಿ ಹಾಕಿದ್ದಾರೆ. ಶೇ 71.11 ಹಾಜರಾತಿಯಾಗಿದ್ದು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ’ ಎಂದು ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

‘ತಾಂತ್ರಿಕ ಸಮಸ್ಯೆಗಳು ಎದುರಾದರೆ ಸಂಬಂಧಿಸಿದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತಿಳಿಸಬೇಕು. ರಾಜ್ಯಮಟ್ಟದ ಸಮಿತಿ ಅದಕ್ಕೆ ಪರಿಹಾರ ಸೂಚಿಸಲಿದೆ. ತುರ್ತು ಸಂದರ್ಭದಲ್ಲಿ ರಜೆಯ ಅಗತ್ಯವಿದ್ದರೆ, ಲಭ್ಯವಿರುವ ರಜೆಯನ್ನು ಬಳಸಿಕೊಳ್ಳಬಹುದು. ಬೆಳಿಗ್ಗೆ ಹಾಜರಿ ಹಾಕಿ, ತುರ್ತು ಸಂದರ್ಭದಲ್ಲಿ ತೆರಳಿದರೆ ಅರ್ಧ ದಿನ ರಜೆ ಪರಿಗಣಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.