ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹಂಚಿಕೆ | ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿದೆ: ಮುರುಗೇಶ ನಿರಾಣಿ

Last Updated 26 ಮಾರ್ಚ್ 2023, 7:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವೀರಶೈವ– ಲಿಂಗಾಯತ ಸಮಾಜದ ಮೀಸಲಾತಿಯನ್ನು ಶೇ 5ರಿಂದ 7ಕ್ಕೆ ಹಾಗೂ ಒಕ್ಕಲಿಗರ ಮೀಸಲಾತಿಯನ್ನು ಶೇ 4ರಿಂದ 6ಕ್ಕೆ ಏರಿಸಲಾಗಿದೆ. ಒಳ ಮೀಸಲಾತಿ ಜಾರಿಗೆ ತಂದು ಎಲ್ಲರಿಗೂ ನ್ಯಾಯ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿರುವ ಈ ನಿರ್ಧಾರದಿಂದ, ಎಲ್ಲಾ ಸಮುದಾಯಗಳು ಸಂತಸಗೊಂಡಿವೆ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿರುವ ಮುಖ್ಯಮಂತ್ರಿ ನಿವಾಸದ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೀಸಲಾತಿ ಹಂಚಿಕೆ ಚುನಾವಣೆಯ ಗಿಮಕ್ ಅಲ್ಲ. ಎರಡು ವರ್ಷಗಳಿಂದ ಮೀಸಲಾತಿಯ ಹಂಚಿಕೆಯ ಪ್ರಕ್ರಿಯೆ ನಡೆಯುತ್ತಿದೆ. ಇದು ಅವಸರದಲ್ಲಿ ಮಾಡಿದ ಕೆಲಸವಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಮೇರೆಗೆ, ಬಿಜೆಪಿ ಮೀಸಲಾತಿ ಜಾರಿಗೊಳಿಸಿದೆ’ ಎಂದರು.

ಪಂಚಮಸಾಲಿ ಮೀಸಲಾತಿಗೆ ಹೋರಾಟ ಸಮಿತಿಯ ವಿಜಯಾನಂದ ಕಾಶಪ್ಪನವರ ವಿರೋಧ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಿಂದೆ ಅವರ ಸರ್ಕಾರವೇ ಇತ್ತು. ಅವರೂ ಶಾಸಕರಾಗಿದ್ದರು. ಆಗ, ಯಾಕೆ ಮೀಸಲಾತಿ ಕೊಡಲಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧಿಸಿದರೆ, ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT