ಹುಬ್ಬಳ್ಳಿ: ಹುಬ್ಬಳ್ಳಿ ನಗರ ಸೇರಿದಂತೆ ಧಾರವಾಡ, ಬಳ್ಳಾರಿ, ವಿಜಯನಗರ, ಉತ್ತರ ಕನ್ನಡ, ಬೆಳಗಾವಿ, ವಿಜಯ ಪುರ ಜಿಲ್ಲೆ ಒಳಗೊಂಡು ಕಿತ್ತೂರು, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ವ್ಯಾಪಕ ಮಳೆ ಆಗಿದೆ.

ಧಾರವಾಡ ಜಿಲ್ಲೆಯ ಕೆಲವೆಡೆ ಮಳೆಯೊಂದಿಗೆ ಗುಡುಗು, ಮಿಂಚಿನ ಆರ್ಭಟ ಜೋರು ಇತ್ತು. ಧಾರವಾಡ ನಗರದಲ್ಲಿ 1 ಸೆಂ.ಮೀ., ಮಳೆಯಾಗಿದೆ.

8 ಮನೆಗಳಿಗೆ ಹಾನಿ: ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ. ಸಿಡಿಲು ಬಡಿದು ಸಂಡೂರಿನಲ್ಲಿ 2 ಎಮ್ಮೆಗಳು ಮೃತಪಟ್ಟಿವೆ. ‘ಕಂಪ್ಲಿಯಲ್ಲಿ–4, ಸಿರುಗುಪ್ಪ –3, ಸಂಡೂರಿನಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ.

2 ವಿದ್ಯುತ್ ಪರಿವರ್ತಕ, 3 ವಿದ್ಯುತ್ ಕಂಬಗಳು, 28 ಮರಗಳು ಉರುಳಿವೆ’ ಎಂದು ಕಂದಾಯ ಇಲಾಖೆ ತಿಳಿಸಿದೆ. ಸಂಡೂರು ತಾಲ್ಲೂಕಿನಲ್ಲಿ 2.1 ಹೆಕ್ಟೇರ್ನಲ್ಲಿ ಹತ್ತಿ ಬೆಳೆ ನಾಶವಾಗಿದೆ.

ಹೊಸಪೇಟೆ ವರದಿ: ತಾಲ್ಲೂಕಿನ ಧರ್ಮಸಾಗರ, ಭುವನಹಳ್ಳಿ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಉರುಳಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲಗೋಡು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಹಂಪಿ ಬಳಿ 10 ಎಕರೆ ಬಾಳೆ ಬೆಳೆ ಹಾನಿ ಉಂಟಾಗಿದೆ. ತಂಪಿನ ವಾತಾವರಣ ಕಾರಣ ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆ ಸುರಿಯಿತು. ದಾಂಡೇಲಿಯಿಂದ ಭಾಗವತಿ ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕಾರವಾರ, ಹೊನ್ನಾವರ ಸೇರಿ ಹಲವೆಡೆ ಸಿಡಿಲಿನ ಅಬ್ಬರಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹಾನಿಯಾದವು.

ಬೆಳಗಾವಿ ಜಿಲ್ಲೆಯ ಸವದತ್ತಿ, ಮುನವಳ್ಳಿ, ಹಿರೇಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ ಮತ್ತು ಕೌಜಲಗಿಯಲ್ಲಿ ಗುಡುಗು–ಮಿಂಚು ಸಹಿತ, ಬೆಳಗಾವಿ ನಗರ, ಗೋಕಾಕ, ಚನ್ನಮ್ಮನ ಕಿತ್ತೂರು, ರಾಮದುರ್ಗ, ಯರಗಟ್ಟಿಯಲ್ಲಿ ಉತ್ತಮ ಮಳೆಯಾಯಿತು.

ವಿಜಯಪುರ ನಗರ ಸೇರಿದಂತೆ ತಾಳಿಕೋಟೆ, ನಾಲತವಾಡ, ಮುದ್ದೇ ಬಿಹಾಳ, ಚಡಚಣ, ಹೊರ್ತಿ ಹಾಗೂ ದೇವರ ಹಿಪ್ಪರಗಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-1990075935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.