ಹುಬ್ಬಳ್ಳಿ: ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ನಡೆದ ‘ಕರುನಾಡ ಸವಿಯೂಟ’ ಆವೃತ್ತಿ–3 ಸ್ಪರ್ಧೆಯಲ್ಲಿ ಧಾರವಾಡದ ದಾಕ್ಷಾಯಣಿ ಹಿರೇಮಠ ಅವರು ಪ್ರಥಮ ಸ್ಥಾನ ಗಳಿಸಿದರು.
ದಾಕ್ಷಾಯಣಿ ಹಿರೇಮಠ ಅವರಿಗೆ ₹10 ಸಾವಿರ, ದ್ವಿತೀಯ ಸ್ಥಾನ ಗಳಿಸಿದ ಶಿರಸಿಯ ನಯನಾ ಹೆಗಡೆ ಅವರಿಗೆ ₹7 ಸಾವಿರ ಮತ್ತು ತೃತೀಯ ಸ್ಥಾನ ಗಳಿಸಿದ ಹುಬ್ಬಳ್ಳಿಯ ಅನ್ನಪೂರ್ಣ ಪೂಜಾರಿ ಅವರಿಗೆ ₹ 5 ಸಾವಿರ ಬಹುಮಾನ ನೀಡಲಾಯಿತು. ಅನಿತಾ ಗಂಗಾಧರ ಕುಲಕರ್ಣಿ ಮತ್ತು ಶುಭಾ ಹೆಗಡೆ ಅವರು ಸಮಾಧಾನಕರ ಬಹುಮಾನ ಪಡೆದರು.
ಸ್ಪರ್ಧಿಗಳು ಸಿದ್ಧಪಡಿ ಸಿದ್ದ ತರಹೇವಾರಿ ಖಾದ್ಯಗಳು ತೀರ್ಪುಗಾರರು, ಗಣ್ಯರು ಮತ್ತು ಜನರ ಮನಗೆದ್ದವು. ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಅವರು ತೀರ್ಪುಗಾರರಾಗಿ, ಫಲಿತಾಂಶ ಪ್ರಕಟಿಸಿದರು.
ಸ್ಪರ್ಧೆಗೆ ಇಂಡೇನ್ ಗ್ಯಾಸ್, ಎಕ್ಸೊ ಸಂಸ್ಥೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಸನ್‌ರೈಸ್ ಶುದ್ಧ ಮಸಾಲಾ, ಇಂಡಿಯಾ ಗೇಟ್ ಬಾಸುಮತಿ ರೈಸ್, ಶ್ರೀಕೃಷ್ಣ ಶುದ್ಧ ಹಳ್ಳಿ ತುಪ್ಪ, ಫಿಲಿಪ್ಸ್ ಜೂಸರ್ ಮಿಕ್ಸರ್ ಗ್ರೈಂಡರ್, ಪ್ರೀತಿ ಕಿಚನ್ ಅಪ್ಲೈಯನ್ಸಸ್, ಎಸ್‌ಎಸ್‌ಪಿ ಹಿಂಗ್, ವೆಂಕೋಬ್ ಚಿಕನ್ ಮತ್ತು ಸುಜಯ್ ಇರಿಗೇಷನ್ ಪ್ರೈವೆಟ್ ಲಿಮಿಟೆಡ್ ಸಹಯೋಗವಿತ್ತು.
ದಾವಣಗೆರೆಯಲ್ಲಿ ಸ್ಪರ್ಧೆ ಇಂದು: ಆಗಸ್ಟ್ 21ರಂದು ಬೆಳಿಗ್ಗೆ 9ರಿಂದ ದಾವಣಗೆರೆಯ ಪಿ.ಬಿ. ರಸ್ತೆ, ಎಚ್.ಪಿ. ಪೆಟ್ರೋಲ್ ಬಂಕ್ ಎದುರಿನ ಹೋಟೆಲ್ ಶ್ರೀ ಪಂಜುರ್ಲಿ ಪ್ಯಾಲೇಸ್‌ನಲ್ಲಿ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆ ನಡೆಯಲಿದೆ.