ಭಾನುವಾರ, ಆಗಸ್ಟ್ 25, 2019
23 °C

ಕ್ರಿಕೆಟ್‌: ಹುಬ್ಬಳ್ಳಿಯಲ್ಲಿ ಆ. 22ರಿಂದ ಕೆಪಿಎಲ್‌

Published:
Updated:
Prajavani

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯ ಒಂಬತ್ತನೇ ಋತುವಿನ ಹುಬ್ಬಳ್ಳಿ ಆವೃತ್ತಿಯ ಪಂದ್ಯಗಳು ಆ. 22ರಿಂದ 25ರ ವರೆಗೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಜರುಗಲಿವೆ.

ಕೆಪಿಎಲ್‌ ಟೂರ್ನಿ ಆ. 16ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ವಾಣಿಜ್ಯ ನಗರಿಯಲ್ಲಿ 22ರಂದು ಒಂದು, ಉಳಿದ ಮೂರು ದಿನ ತಲಾ ಎರಡು ಪಂದ್ಯಗಳು ನಡೆಯಲಿವೆ. ಇಲ್ಲಿನ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌–ಬೆಳಗಾವಿ ಪ್ಯಾಂಥರ್ಸ್‌ ಪೈಪೋಟಿ ನಡೆಸಲಿವೆ. 

ಟೂರ್ನಿಯಲ್ಲಿ ಒಟ್ಟು 25 ಪಂದ್ಯಗಳು ಜರುಗಲಿದ್ದು, ಬೆಂಗಳೂರಿನಲ್ಲಿ 9, ಹುಬ್ಬಳ್ಳಿಯಲ್ಲಿ 7 ಮತ್ತು ಮೈಸೂರಿನಲ್ಲಿ 9 ಪಂದ್ಯಗಳು ಆಯೋಜನೆಯಾಗಿವೆ.

23ರಂದು ಬಿಜಾಪುರ ಬುಲ್ಸ್‌–ಮೈಸೂರು ವಾರಿಯರ್ಸ್‌ (ಮ. 3ಕ್ಕೆ), ಶಿವಮೊಗ್ಗ ಲಯನ್ಸ್‌–ಬಳ್ಳಾರಿ ಟಸ್ಕರ್ಸ್‌ (ಸಂಜೆ 7ಕ್ಕೆ), 24ರಂದು ಬೆಳಗಾವಿ ಪ್ಯಾಂಥರ್ಸ್‌–ಶಿವಮೊಗ್ಗ ಲಯನ್ಸ್‌ (ಮ. 3ಕ್ಕೆ), ಹುಬ್ಬಳ್ಳಿ ಟೈಗರ್ಸ್‌–ಬಿಜಾಪುರ ಬುಲ್ಸ್‌ (ಸಂ. 7ಕ್ಕೆ), 25ರಂದು ಬೆಳಗಾವಿ ಪ್ಯಾಂಥರ್ಸ್‌–ಶಿವಮೊಗ್ಗ ಲಯನ್ಸ್‌ (ಮ. 3ಕ್ಕೆ) ಮತ್ತು ‌ಹುಬ್ಬಳ್ಳಿ ಟೈಗರ್ಸ್‌–ಬೆಂಗಳೂರು ಬ್ಲಾಸ್ಟರ್ಸ್ (ಸಂ. 7ಕ್ಕೆ) ಪೈಪೋಟಿ ನಡೆಸಲಿವೆ.

Post Comments (+)