ಕುಂದಗೋಳ: ‘ತಾಲ್ಲೂಕಿನ ದೇವನೂರ ಗ್ರಾಮದಲ್ಲಿ ದ್ಯಾಮವ್ವ ದೇವಿ, ದುರ್ಗಾದೇವಿ, ಕರಿಯಮ್ಮ ದೇವಿಯ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಗ್ರಾಮದೇವಿ ಜಾತ್ರಾ ಮಹೋತ್ಸವ ಮೇ 8ರಿಂದ 16ರವರೆಗೆ ಜರುಗಲಿದೆ’ ಎಂದು ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ಗಂಟೆಗೆ ನೂತನ ಶಿಲಾ ಮೂರ್ತಿಗಳ ಪುರ ಪ್ರವೇಶ, ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಪುರುಷರು ಭಂಡಾರದ ಓಕುಳಿ ಆಚರಿಸಲಿದ್ದಾರೆ. ನಂತರ, ಧಾನ್ಯಧಿವಾಸ, ಜಲಾಧಿವಾಸ, ತೈಲಾಧಿವಾಸ, ಶಯನಾದಿವಾಸ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ’ ಎಂದರು.

‘14ರಂದು ಬೆಳಿಗ್ಗೆ ಗಣಹೋಮ, ದುರ್ಗಾಹೋಮ, ನವಗ್ರಹ ವಾಸ್ತು ಶಾಂತಿ, ಪೂಜೆಯೊಂದಿಗೆ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮಹೋತ್ಸವ ನೆರವೇರಲಿದೆ’ ಎಂದು ತಿಳಿಸಿದರು.

‘15ರಂದು ಹಣ್ಣು–ಕಾಯಿ ಅರ್ಪಿಸುವುದು, 16ರಂದು ಕುಂಕುಮ ಹರಿದ್ರಾ ಪೂಜೆ ಜರುಗುವುದು. 16ರವರೆಗೆ ಸಂಜೆ ಆಯೋಜಿಸಿರುವ ಧಾರ್ಮಿಕ ಸಭೆಗೆ ರಾಜ್ಯದ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವರು’ ಎಂದರು.

‘ಗ್ರಾಮದ ಮಹಿಳೆಯರಿಗೆ ಉತ್ಸವ ಸಮಿತಿಯಿಂದ ಸೀರೆ ಉಡುಗೊರೆ ನೀಡಲಾಗುವುದು. ಒಂದು ವಾರ ಗ್ರಾಮದಲ್ಲಿ ಯಾರೂ ಅಡುಗೆ ಮಾಡುವಂತಿಲ್ಲ. ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-24-723676869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.