ಕುಂದಗೋಳ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬೀಜ ಪಡೆಯಲು ನೂರಾರು ರೈತರು ಒಮ್ಮೆಲೇ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.

ರೈತರ ಸರತಿಯ ಪಟ್ಟಿ ಮಾಡಿದ್ದು, ವಿತರಣೆ ವಿಳಂಬಕ್ಕೆ ರೈತರು ವಿರೋಧಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೃಷಿ ಇಲಾಖೆಯಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತರಾತುರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಉದ್ಘಾಟಿಸಿದರು.

‘ಇಲ್ಲಿ ಸೋಯಾಬೀನ್ ಕೆಡಿಎಸ್ 726 ಸಂಗ್ರಹ ಕಡಿಮೆ ಇದ್ದು, ತಮಗೆ ಬಂದಂತೆ ಪಟ್ಟಿ ಮಾಡಿದರೆ ನಾವೇನು ಮಾಡೋಣ’ ಎಂದು ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಪ್ರವೀಣ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಕೇಳಿದರೆ ಮಂಗಳವಾರ, ಬುಧವಾರ ನೀಡುವುದಾಗಿ ತಿಳಿಸುತ್ತಿದ್ದಾರೆ. ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮಧ್ಯಾಹ್ನ 12.30ಕ್ಕೆ ವಿತರಣೆ ಪ್ರಾರಂಭಿಸಿದರು. ರೈತರು ನಡುವೆ ಹಾಗೂ ಕೃಷಿ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ಪಟ್ಟಿ ಪ್ರಕಾರ ಹೆಸರು ಕರೆದು ವಿತರಣೆ ಪ್ರಾರಂಭಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಗಡ್ದದವರ ಪ್ರತಿಕ್ರಿಯೆ ನೀಡಿ, ‘ಶಾಸಕರು ಲಭ್ಯವಿರದ ಕಾರಣ ರೈತರಿಗೆ ತೊಂದರೆಯಾಗಬಾರದು, ನೀವೇ ಪ್ರಾರಂಭಿಸಿ ಎಂದು ಹೇಳಿ ದ್ದರಿಂದ ಇಂದು ಆರಂಭಿಸಿದ್ದೇವೆ. ರೈತರ ಒಂದು ಎಫ್.ಐ.ಡಿಗೆ ಒಟ್ಟು 3 ಬ್ಯಾಗ್ ಸೋಯಾಬೀನ್ ವಿತರಿಸಲಾಗುತ್ತಿದೆ. ಈಗ ಸಂಗ್ರಹಕ್ಕೆ ಅನುಗುಣವಾಗಿ ಎಲ್ಲ ರೈತರಿಗೂ ದೊರೆಯಲಿ ಎಂಬ ಉದ್ದೇಶದಿಂದ 2 ಬ್ಯಾಗ್ ವಿತರಿಸುತ್ತಿದ್ದೇವೆ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ 5 ಬೀಜ ವಿತರಣಾ ಕೇಂದ್ರಗಳಿದ್ದು, ಒಟ್ಟು ಈಗ ಸೋಯಾಬೀನ್ 500 ಕ್ವಿಂಟಲ್, ಉದ್ದು 69 ಕ್ವಿಂಟಲ್, ಹೆಸರು 46 ಕ್ವಿಂಟಲ್, ಶೇಂಗಾ 230 ಕ್ವಿಂಟಲ್, ಮೆಕ್ಕೆಜೋಳ 73 ಕ್ವಿಂಟಲ್ ಸಂಗ್ರಹ ಬಂದಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-24-1985793856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.