ಕುಂದಗೋಳ: ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ ಘೋಷಣೆಯಾಗಿದ್ದು,ನಾಮಪತ್ರ ಸ್ವೀಕರಿಸಲು ನಿಗದಿಯಾಗಿದ್ದ ಏ. 11 ಹಾಗೂ 12ರಂದು ಕಚೇರಿಯಲ್ಲಿರಬೇಕಿದ್ದ ಚುನಾವಣಾಧಿಕಾರಿಯೇ ಇರದೆ ಚುನಾವಣೆ ಯಕ್ಷಪ್ರಶ್ನೆಯಾಗಿದೆ.

ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಏ.11 ಶನಿವಾರ ಮತ್ತು 12 ಭಾನುವಾರ ನಡೆಯಬೇಕಿತ್ತು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ಎರಡು ದಿನ ಚುನಾವಣಾ ಅಧಿಕಾರಿ ಬಾರದೆ ಶಿಕ್ಷಕರು ನಾಮಪತ್ರ ಸಲ್ಲಿಸಲಾಗದೆ ತೆರಳಿ ಘಟನೆ ಜರುಗಿದೆ.

ತಹಶೀಲ್ದಾರ್ ಕಚೇರಿಗೆ ತೆರಳುವ ಮಾರ್ಗದಲ್ಲಿ ಇರುವ ಶಾಲಾ ಶಿಕ್ಷಕರ ಸಂಘದ ಕಟ್ಟಡದಲ್ಲಿ ನಾಮಪತ್ರ ಸ್ವೀಕರಿಸಲು ಚುನಾವಣಾಧಿಕಾರಿ ಇರಬೇಕಿತ್ತಾದರೂ ಅಲ್ಲಿ ಖಾಲಿ ಖುರ್ಚಿ ತಿರುಗುವ ಪ್ಯಾನ್ ಎರಡು ಹೊರತಾಗಿ ನೇಮಕಗೊಂಡ ಅಧಿಕಾರಿಯೇ ಇಲ್ಲ. ಇತ್ತ ಉಮೇದುವಾರಿಕೆ ಸಲ್ಲಿಸಲೆಂದು ಬಂದಿದ್ದ ಹಲವು ಶಿಕ್ಷಕರು ಕಾದು ಅಲ್ಲಿಂದ ಹೊರಟು ಹೋದರು. ಏ.13 ರಂದು ಪರಿಶೀಲನೆ, ಏ. 14 ನಾಮಪತ್ರ ವಾಪಸ್ಸಾತಿ, ಅಗತ್ಯ ಬಿದ್ದಲ್ಲಿ ಮತದಾನ ಏ.19 ಭಾನುವಾರ ನಿಗದಿಯಾಗಿದೆ. ಎಣಿಕೆ ಕಾರ್ಯ ಕೂಡ ಅಂದು ಸಂಜೆ 6:30 ರಿಂದು ಜರುಗಿ ಫಲಿತಾಂಶ ಕೂಡ ಅಂದೇ ನಿಗದಿಯಾಗಿತ್ತು.

ಶಿಕ್ಷಕರ ಸಂಘದ ಚುನಾವಣೆಗೆ ಯಾವ ಅಧಿಕಾರಿಯನ್ನು ನೇಮಿಸಲಾಗಿದೆ ಎಂಬುದು ತಹಶೀಲ್ದರ್, ಜಿಲ್ಲಾ ಸಹಕಾರ ಸಂಘದ ಅಧಿಕಾರಿಗಳಿಗೂ ಗೊತ್ತಿಲ್ಲ.

‘ಇದು ಸಹಕಾರಿ ಸಂಘದ ವ್ಯಾಪ್ತಿಗೆ ಬರುವುದಿಲ್ಲ. ಶಿಕ್ಷಕ ಸಂಘದವರು ಅವರಲ್ಲೆ ಚುನಾವಣಾಧಿಮಾರಿ ನೇಮಿಸಿ ನಡೆಸುತ್ತಾರೆ’ ಎಂದು ಹೇಳಿದರು.

ಶಿಕ್ಷಕರ ಸಂಘದ ಹಿಂದಿನ ಅಧ್ಯಕ್ಷ ಮಾರುತಿ ಘೊಡಕೆ ಅವರನ್ನು ಪ್ರಶ್ನಿಸಲು ಹಲವಾರು ಬಾರಿ ಕರೆ ಮಾಡಿದರೆ ಉತ್ತರವಿಲ್ಲ. ಈ ಕುರಿತು ಹಿಂದಿನ ಕಮಿಟಿಯ ಖಜಾಂಚಿಯಾಗಿದ್ದ ಡಿ.ಸಿ.ಹಿರೇಮಠ ಅವರನ್ನು ಸಂಪರ್ಕಿಸಿದಾಗ ಚನಾವಣೆ ಪ್ರಕ್ರಿಯೆ ಹಾಗೂ ಚುನಾವಣಾಧಿಕಾರಿ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.

ಚುನಾವಣೆ ಅಧಿಕಾರಿ ಬಾರದೆ ಇರುವುದರಿಂದ ಯಾವುದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿಲ್ಲ ಎನ್ನುತ್ತಿದ್ದಾರೆ.

‘ನಾನು ಚುನಾವಣೆಗೆ ಸ್ಪರ್ಧಿಸಲು ಬಂದಿದ್ದೇವು. ಆದರೆ ಇಲ್ಲಿ ಚುನಾವಣಾಧಿಕಾರಿಯೇ ಇಲ್ಲ. ಯಾರನ್ನು ನೇಮಿಸಿದ್ದಾರೆಂಬುದೇ ಗೊತ್ತಿಲ್ಲ’ ಎಂದು ಹೆಸರು ಹೆಳಲು ಇಚ್ಚಿಸದ ಆಕಾಂಕ್ಷಿಗಳು ತಮ್ಮ ಅಳಲು ಹೇಳಿದರು.

ಒಟ್ಟಾರೆ ಮಕ್ಕಳಿಗೆ ಶಿಕ್ಷಣ, ಶಿಸ್ತು, ಸಂವಿಧಾನ, ಮತದಾನ ಜಾಗೃತಿ ಕಲಿಸಬೇಕಾದ ಶಿಕ್ಷಕರ ಸಂಘದ ಕಾರ್ಯ ವೈಕರಿ ಸಾರ್ವಜನಿಕರಲ್ಲಿ ಆಶ್ಚರ್ಯ ಉಂಟು ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-24-1630517183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.