ಕುಂದಗೋಳ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಾಂತಿ–ಭೇದಿ (ಅಜೀರ್ಣ ಸಂಬಂಧಿತ ಅಸ್ವಸ್ಥತೆ)ಯಿಂದ ತಾಲ್ಲೂಕ ಸರ್ಕಾರಿ ಆಸ್ಪತ್ರೆಗೆ ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿದ್ದು, ಪಟ್ಟಣ, ಕಮಡೊಳ್ಳಿ, ದೇವನೂರ, ಪಶುಪತಿಹಾಳ, ಯರಿನಾರಾಯಣ, ಕುರಡಿಕೇರಿ, ತರ್ಲಘಟ್ಡ ಗ್ರಾಮಗಳ ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಲ್ಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ತಿಮ್ಮಯ್ಯ ಅವರನ್ನು ಈ ಕುರಿತು ಮಾಹಿತಿ ನಿಡಿದ್ದು, ‘ನೀರಿನ ಸಮಸ್ಯೆಯಿಂದ ಮಾತ್ರ ಆಗಿದೆ ಎನ್ನುವಂತಿಲ್ಲ, ಅತಿಯಾದ ಬಿಸಿ ವಾತಾವರಣ, ಆಹಾರ ಇತ್ಯಾದಿ ಕಾರಣಗಳಿದ್ದು, ಪಟ್ಟಣದ ಮಂಜುನಾಥ ಎಂಬುವವರಿಗೆ ರಕ್ತ ಹೀನತೆಯಿಂದ ಹೀಗಾಗಿದೆ. ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ಸೂಚಿಸಲಾಗಿದೆ. ಉಳಿದ ಎಲ್ಲ ರೋಗಿಗಳ ಸಾಮಾನ್ಯವಾಗಿದ್ದು ಯಾವುದೇ ಗಂಬೀರತೆಯಿಲ್ಲ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ, ‘ನಾವು ನೀರಿನ ಪರಿಕ್ಷೆ ಮಾಡಿ ಸರಬರಾಜು ಮಾಡುತ್ತಿದ್ದು ಯಾವುದೇ ಸಮಸ್ಯೆಯಿಲ್ಲ’ ಎಂದು ಹೇಳಿದರು.

ತಹಶೀಲ್ದಾರ್ ರಾಜು ಮಾವರಕರ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ನಂತರ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಸರಿಯಾಗಿ ಚಿಕಿತ್ಸೆ ಹಾಗೂ ಯಾವುದೇ ತೊಂದರೆ ಆಗದಂತೆ ನಿಭಾಯಿಸಲು ಮತ್ತು ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-24-109099799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.