ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಬಿಲ್ಡ್ ಟೆಕ್’ ವಸ್ತು ಪ್ರದರ್ಶನಕ್ಕೆ ಚಾಲನೆ

Last Updated 18 ನವೆಂಬರ್ 2022, 15:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ, ಬ್ಯಾಂಕ್‌ ಆಫ್ ಬರೋಡಾ ಸಹ ಪ್ರಾಯೋಜಕತ್ವದಲ್ಲಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಬಿಲ್ಡ್ ಟೆಕ್-2022’ ಬೃಹತ್ ವಸ್ತು ಪ್ರದರ್ಶನಕ್ಕೆಶುಕ್ರವಾರ ಚಾಲನೆ ಸಿಕ್ಕಿತು.

ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಾಗೂ ಎಸ್‌.ಎಸ್‌. ಶೆಟ್ಟರ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರಅವರು ರಿಬ್ಬನ್ ಕತ್ತರಿಸುವ ಮೂಲಕ, ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಸಾಮಗ್ರಿಗಳನ್ನು ಪರಿಶೀಲಿಸಿದರು.

‘ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನ ಹಾಗೂ ಕಟ್ಟಡ ಸಾಮಗ್ರಿಗಳ ಬಗ್ಗೆ ಒಂದೇ ಸೂರಿನಡಿ ಹೆಚ್ಚಿನ ಮಾಹಿತಿ ನೀಡುವುದು ಪ್ರದರ್ಶನದ ಪ್ರಮುಖ ಉದ್ದೇಶ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ವಿವಿಧ ಹೊಸ ಕಂಪನಿಗಳ ಆಕರ್ಷಕ ಮಳಿಗೆಗಳು ಇಲ್ಲಿದ್ದು, ಸಾರ್ವಜನಿಕರಿಗೆ ಭರಪೂರ ಮಾಹಿತಿ ಸಿಗಲಿದೆ’ ಎಂದು ಆಯೋಜಕರಾದ ಕಲ್ಮೇಶ ತೋಟದ ಹಾಗೂ ಉಮಾಪತಿ ಎಸ್.ಎಂ. ತಿಳಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್‌ ಸೆಂಟರ್‌ ಅಧ್ಯಕ್ಷ ಆನಂದ ಪಾಂಡುರಂಗಿ,ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಮುಖ್ಯಸ್ಥ ಪ್ರದೀಪ ದೇಸಾಯಿ, ಕ್ರೆಡಾಯ್ ಅಧ್ಯಕ್ಷ ಸಾಜೀದ ಫಾರೇಶ, ಲಿಂಟೆಲ್ ಬಿಲ್ಡಿಂಗ್ ಸೂಲ್ಯೂಷನ್ಸ್‌ನ ಸಮರ್ಥ ನಾಡಿಗೇರ ಮತ್ತು ಸುಮಂತ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT