ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಸ್‌ ಇನ್ನೊವೇಷನ್‌ ಸೆಂಟರ್‌ಗೆ ಚಾಲನೆ

Last Updated 21 ನವೆಂಬರ್ 2022, 16:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಟಿಕೆ ಸಾಮಾನುಗಳು ಹಾಗೂ ಗ್ರಾಹಕರ ಬಳಕೆಯ ಉತ್ಪನ್ನಗಳ ಹೊಸ ವಿನ್ಯಾಸ ರೂಪಿಸಲು ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏಕಸ್‌ ಕಂಪನಿಯು ಸೋಮವಾರ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಮೆಕ್ಯಾನಿಕ್‌ ವಿಭಾಗದಲ್ಲಿ ಏಕಸ್‌ ಇನ್ನೊವೇಷನ್‌ ಸೆಂಟರ್‌ ಸ್ಥಾಪಿಸಿದೆ.

‘ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ 6 ತಿಂಗಳು ತರಬೇತಿ (ಇಂಟರ್ನ್‌ಷಿಪ್‌) ನೀಡಲು ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೇರೆ ವಿಭಾಗದ ಹಾಗೂ ಬೇರೆ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳೂ ಇಲ್ಲಿ ತರಬೇತಿ ಪಡೆಯಬಹುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್‌ ಹಾಗೂ ಏಕಸ್‌ ಕಂಪನಿಯ ಅಧ್ಯಕ್ಷ ಅರವಿಂದ ಮೆಳ್ಳಿಗೇರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಟಿಕೆ ಸಾಮಾನು ತಯಾರಿಕೆಯಲ್ಲಿ ಚೀನಾ ಕಂಪನಿಗಳ ಪಾರಮ್ಯ ಇದೆ. ನಮ್ಮಲ್ಲೂ ಹೊಸ ವಿನ್ಯಾಸಗಳ ಆಟಿಕೆ ತಯಾರಿಸಿದರೆ ಚೀನಾ ಕಂಪನಿಗಳಿಗೆ ಪೈಪೋಟಿ ನೀಡಬಹುದು. ಈ ನಿಟ್ಟಿನಲ್ಲಿ ಏಕಸ್‌ ಇನ್ನೊವೇಷನ್‌ ಸೆಂಟರ್‌ ಸಹಕಾರಿಯಾಗಲಿದೆ ಎಂದು ಅರವಿಂದ ಮೆಳ್ಳಿಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT