ವಕೀಲರ ಕಲ್ಯಾಣಕ್ಕಿಲ್ಲ ಯೋಜನೆ: ಪ್ರತಿಭಟನೆ

7

ವಕೀಲರ ಕಲ್ಯಾಣಕ್ಕಿಲ್ಲ ಯೋಜನೆ: ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ವಕೀಲರ ಕಲ್ಯಾಣಕ್ಕೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿ ವಕೀಲರ ಸಂಘದ ಸದಸ್ಯರು ಹೊಸೂರಿನಲ್ಲಿರುವ ನೂತನ ನ್ಯಾಯಾಲಯದ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಳ್ನಾವರ ತಾಲ್ಲೂಕಿನ ಹೊಲ್ತಿಕೋಟಿ ಗ್ರಾಮದಲ್ಲಿ ನ್ಯಾಯಾಲಯದ ಆದೇಶದಂತೆ ಆಸ್ತಿ ಜಪ್ತಿ ಮಾಡಲು ಹೋದ ಧಾರವಾಡದ ಬೇಲಿಫರ ಮೇಲೆ ನಡೆದ ಹಲ್ಲೆಯನ್ನೂ ವಕೀಲರು ಖಂಡಿಸಿದರು.

ತಹಶೀಲ್ದಾರ್ ಪರವಾಗಿ ಸ್ಥಳಕ್ಕೆ ಬಂದ ಹೆಚ್ಚುವರಿ ತಹಶೀಲ್ದಾರ್‌ ಪ್ರಕಾಶ ನಾಶಿ ಮನವಿ ಪತ್ರ ಸ್ವೀಕರಿಸಿದರು.

ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಜಯರಾಜ್ ಪಾಟೀಲ, ಬಿ.ವಿ. ಕೋರಿಮಠ. ಎಸ್.ಜಿ. ದೊಡ್ಡಮನಿ, ದೇವರಾಜ ವಿ. ಗೌಡರ, ಆರ್.ಎಚ್. ಕಾಮಧೇನು, ವಿಠ್ಠಲ ಸೋಮನಕೊಪ್ಪ, ಮಂಜುನಾಥ ಕಟ್ಟಿ, ಸೀಮಿತ ಶೆಟ್ಟರ್, ಶೋಭಾ ಹಾಗೂ ಸವಿತಾ ಹಾನಗಲ್ಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !