ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಸಂಗೀತದಿಂದ ನೆಮ್ಮದಿಯ ಬದುಕು’

Last Updated 26 ಆಗಸ್ಟ್ 2022, 10:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಸಂಗೀತ ಪರಮ ಔಷಧವಾಗಿದ್ದು, ಅದನ್ನು ಕೇಳುವ ದಿನಚರಿ ಬೆಳೆಸಿಕೊಳ್ಳಬೇಕು’ ಎಂದು ಆಕಾಶವಾಣಿ ಕಲಾವಿದೆ ರೇಖಾ ಹೆಗಡೆ ಹೇಳಿದರು.

ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಭವನದಲ್ಲಿ ಪ್ರೋಬಸ್‌ ಕ್ಲಬ್‌ ಉಣಕಲ್‌ ಶುಕ್ರವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ‘ದೈನಂದಿನ ಬದುಕಿನಲ್ಲಿ ಸಂಗೀತದ ಮಹತ್ವ’ ಕುರಿತು ಅವರು ಮಾತನಾಡಿದರು. ಈ ಹಿಂದೆ ಸಂಜೆಯಾಗುತ್ತಿದ್ದಂತೆ ಮನೆ–ಮನೆಗಳಲ್ಲಿ ಭಗವಂತನ ನಾಮ ಸ್ಮರಣೆ, ಭಜನೆಗಳು ನಡೆಯುತ್ತಿದ್ದವು. ಗ್ರಾಮೀಣ ಭಾಗಗಳಲ್ಲಿನ ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆಗಳು ನಡೆಯುತ್ತಿದ್ದವು. ಸಂಗೀತದ ಆರಾಧನೆ ನಡೆಯುತ್ತಿತ್ತು. ಆದರೆ, ಇದೀಗ ಭಜನೆ, ಸಂಗೀತ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಅವುಗಳನ್ನು ಉಳಿಸಿ–ಬೆಳೆಸಿಕೊಂಡು, ನೆಮ್ಮದಿಯ ಬದುಕಿಗೆ ಕಾರಣವಾಗಬೇಕು’ ಎಂದರು.

‘ಇಂತಹದ್ದೇ ಸಂಗೀತ ಕೇಳಬೇಕು, ಹಾಡಬೇಕು ಎನ್ನುವ ಯಾವ ನಿಯಮವೂ ಇಲ್ಲ. ನಮಗಿಷ್ಟವಾದ ಹಾಡನ್ನು ಶ್ರದ್ಧೆಯಿಂದ ಕೂತು ಕೇಳಬೇಕು. ಸಮರ್ಪಣಾ ಭಾವದಿಂದ ಮೆಲುದನಿಯಲ್ಲಿ ಹಾಡಿದರೆ ಮನಸ್ಸು ಪ್ರಪುಲ್ಲವಾಗುತ್ತದೆ. ವಚನ, ದಾಸರ ಪದಗಳಲ್ಲಿನ ಒಳಾರ್ಥಗಳು ಗೋಚರಿಸುತ್ತವೆ. ಅದರಿಂದ ರಕ್ತದೊತ್ತಡ, ಮಾನಸಿಕ ಕಾಯಿಲೆಗಳನ್ನು ದೂರವಿಡಬಹುದು. ಸಂಗೀತವನ್ನು ನಾವು ಪ್ರೀತಿಸಿದರೆ, ಅದು ನಮ್ಮನ್ನು ಪ್ರೀತಿಸುತ್ತದೆ’ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ರವೀಂದ್ರ ಚಕ್ಕಾತಿ ಅವರು ವಚನಗಳನ್ನು ಪ್ರಸ್ತುತ ಪಡಿಸಿದರು. ಕ್ಲಬ್‌ ಅಧ್ಯಕ್ಷ ಡಾ. ಎಂ.ಬಿ. ಸಾಂಬ್ರಾಣಿ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಎಸ್‌. ಕರಡಿ, ಕೆ.ಎಸ್‌. ಕೌಜಲಗಿ, ಎಸ್‌.ಕೆ. ಹುಲಿಹಳ್ಳಿ, ಸಿ.ವಿ. ತಾರನಾಳ, ವಿ.ಆರ್‌. ಕೊಪ್ಪರ, ಎನ್‌.ಎಚ್‌. ಭಂಡಾರಿ, ಎಸ್‌.ಎಸ್‌. ಪಾಟೀಲ, ಎನ್‌.ಎಫ್‌. ಮಂಡಿ, ಬಿ.ಎಸ್‌. ಮಾಳವಾಡ, ಎಂ.ಎಸ್‌. ಮರಗೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT