ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ ಜಾರಿಗೆ ಆಗ್ರಹ: ದೆಹಲಿ ಚಲೋ 24ರಂದು

Last Updated 22 ಜುಲೈ 2022, 4:29 IST
ಅಕ್ಷರ ಗಾತ್ರ

ನವಲಗುಂದ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಗ್ರೇಡ್ 2 ತಹಶೀಲ್ದಾರ್ ಎಂ.ಜೆ. ಹೊಕ್ರಾಣಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ಮನವಿ ಸಲ್ಲಿಸಿತು.

ರೈತ ಮುಖಂಡ ಸುಭಾಷ ಚಂದ್ರ ಗೌಡ ಪಾಟೀಲ, ‘ನ್ಯಾಯಾಧಿಕರಣ ತೀರ್ಪು ಬಂದು ಮೂರು ವರ್ಷವಾದರೂ ಕಳಸಾ ಬಂಡೂರಿ ಸ್ಥಳಗಳಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ ಹಾಗೂ ರಾಜ್ಯ ಸರ್ಕಾರ ಈ ಯೋಜನೆ ಗಾಗಿ ಅನುದಾನವೂ ಮಿಸಲಿರಿಸಿಲ್ಲ’ ಎಂದರು.

ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯನವರ, ‘ಶೀಘ್ರವಾಗಿ ಕಾಮಗಾರಿ ಆರಂಭಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಮ್ಮ ರಾಜ್ಯದ ಸಂಸದರ ಮೇಲೆ ಒತ್ತಡ ಹೇರಲು ಜುಲೈ 24ರಂದು ದೆಹಲಿ ಚಲೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಭಾಗದ ಶಾಸಕರು, ಸಂಸದರು, ಸಚಿವರು, ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಿದ್ದಲಿಂಗಪ್ಪ ಹಳ್ಳದ, ರವಿ ತೋಟದ, ಶ್ರೀಕಾಂತ ಜಾವುರ, ಭಾಗವಾನ, ಯಲ್ಲಪ್ಪ, ದಾಡಿಬಾಯಿ, ಗುರುನಾಥ ಕುಲಕರ್ಣಿ, ನಿಂಗಪ್ಪ ತೋಟದ, ಶಂಕ್ರು ಸಂಗಟಿ, ಗೋವಿಂದರೆಡ್ಡಿ ಮೊರಬಾ, ಬಸಪ್ಪ ಬಳ್ಳೊಳ್ಳಿ, ಶವಪ್ಪ ಸಂಗಳದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT