ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿಯ ದಾಖಲೆ ಅಲೆದಾಟಕ್ಕೆ ಬ್ರೇಕ್‌’

Last Updated 13 ಮಾರ್ಚ್ 2022, 3:49 IST
ಅಕ್ಷರ ಗಾತ್ರ

ಕಲಘಟಗಿ: ಆಸ್ತಿ ದಾಖಲೆ ಅಲೆದಾಟ ತಪ್ಪಿಸಲು ಸರ್ಕಾರ ರೈತರಿಗೆ ಉತ್ತಮ ಯೋಜನೆ ಜಾರಿಗೆ ತಂದಿದೆ. ಎಲ್ಲರೂ ಅಧಿಕಾರಿಗಳ ಜೊತೆ ಕೈಜೋಡಿಸಿ ತಪ್ಪು ಇದ್ದರೆ ದಾಖಲೆ ಸರಿಪಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎಂ‌. ನಿಂಬಣ್ಣವರ ತಿಳಿಸಿದರು.

ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಗ್ರಾಮದ ‌ಮನೆ ಮನೆಗೆ ತೆರಳಿ ಕಂದಾಯ ದಾಖಲೆ ಹಸ್ತಾಂತರ ಮಾಡಿದರು. ನಂತರ ಜಿಲ್ಲಾಧಿಕಾರಿ ನಿತೇಶ್‌ ಕೆ. ಪಾಟೀಲ ತಾಲ್ಲೂಕಿನ ದೇವಿಕೊಪ್ಪ ಗ್ರಾಮಕ್ಕೆ ತೆರಳಿ ಆಸ್ತಿಯ ದಾಖಲೆ ನೀಡಿದರು.

ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಉಪ ತಹಶೀಲ್ದಾರ್ ರವೀಂದ್ರ ಹಾದಿಮನಿ, ಕೆಎಂಎಫ್ ನಿರ್ದೇಶಕಿ ಗೀತಾ ಮರಲಿಂಗಣ್ಣವರ, ವಿಜಯಲಕ್ಷ್ಮಿ ಆಡಿನವರ, ಪಿಡಿಒ ಬಸವರಾಜ ಜಮ್ಮಿಹಾಳ, ಅಶೋಕ ಆಡಿನವರ, ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆಣ್ಣವರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ದೊಡ್ಡಗಡ್ಡೆಪ್ಪನವರ, ಸದಸ್ಯರಾದ ರಮೇಶ ರೊಟ್ಟಿ, ವಿನಾಯಕ ಕುರಿ, ಗ್ರಾಮ ಲೆಕ್ಕಾಧಿಕಾರಿ ಆನಂದ ನಾಯ್ಕ, ಅಶೋಕ ಆಡಿನವರ, ಬಸಲಿಂಗಪ್ಪ ದೇಸಾಯಿ, ನಿಂಗಪ್ಪ ಮಿರ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT