ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾರಿಗಡ ಚಿತ್ರದ ಹಾಡು ಬಿಡುಗಡೆ 17ಕ್ಕೆ’

Last Updated 15 ಜೂನ್ 2022, 2:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರತಿಬಿಂಬ ಕ್ರಿಯೇಷನ್ಸ್‌ನಿಂದ ನಿರ್ಮಾಣಗೊಂಡಿರುವ ಮಾರಿಗಡ ಸಿನಿಮಾದ ಮೊದಲ ಹಾಡನ್ನು ಜೂನ್ 17ರಂದು ಸಂಜೆ 6.30ಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ವಿಶ್ವನಾಥ ಎಂ. ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಪ್ರತಿಭೆಗಳಾದ ಮಾರೇಶ, ಅನನ್ಯ, ರೂಪಾ, ಶಶಿಕುಮಾರ್‌, ಮಹೇಶ, ಅಂಬಿಕಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟು ಐದು ಹಾಡುಗಳಿದ್ದು, ವಿನಯ ಮತ್ತು ವಿವೇಕ ಸಂಗೀತ ಸಂಯೋಜಿಸಿದ್ದಾರೆ.ಗಾಯಕರಾದ ಅನನ್ಯಾ ಭಟ್‌, ವಿಜಯ ಪ್ರಕಾಶ್, ಸಂತೋಷ ವೆಂಕಿ ಹಾಡಿದ್ದಾರೆ ರಘು ಹೂಗಿ ಛಾಯಾಗ್ರಹಣ, ದರ್ಶನ ಕುಲಕರ್ಣಿ ಸಂಕಲನ ಚಿತ್ರಕ್ಕಿದೆ’ ಎಂದು ಹೇಳಿದರು.

‘ಹುಬ್ಬಳ್ಳಿ–ಧಾರವಾಡ, ದಾಂಡೇಲಿ, ಉಳವಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಅನಿರೀಕ್ಷಿತವಾಗಿ ಸಮಸ್ಯೆಯಲ್ಲಿ ಸಿಲುಕುವ ಯುವಕರು ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಚಿತ್ರದ ತಿರುಳು. ಆಗಸ್ಟ್‌ನಲ್ಲಿ ರಾಜ್ಯದಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT