ಡಿ 16ರಂದು ರಾಜ್ಯಮಟ್ಟದ ವಧು–ವರರ ಸಮಾವೇಶ

7

ಡಿ 16ರಂದು ರಾಜ್ಯಮಟ್ಟದ ವಧು–ವರರ ಸಮಾವೇಶ

Published:
Updated:

ಹುಬ್ಬಳ್ಳಿ: ಆನಂದ ಅಸೋಸಿಯೇಟ್ಸ್‌ ವತಿಯಿಂದ ಇದೇ 16ರಂದು ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಟೂರಿಸ್ಟ್‌ ಹೋಟೆಲ್‌ ಸಭಾಂಗಣದಲ್ಲಿ ರಾಜ್ಯಮಟ್ಟದ ವಧು–ವರರ ಸಮಾವೇಶ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಭಾಗದ ವಧು–ವರರು ಪಾಲ್ಗೊಳ್ಳಬಹುದು. ಉನ್ನತ ವ್ಯಾಸಂಗ ಪಡೆದ ಅನಿವಾಸಿ ಭಾರತೀಯರು, ವೈದ್ಯರು, ಎಂಜಿನಿಯರುಗಳು, ವೀರಶೈವ ಲಿಂಗಾಯತ, ಜಂಗಮ, ಪಂಚಪೀಠ, ಪಂಚಮಸಾಲಿ, ಬಣಜಿಗ, ಬಣಗಾರ, ಶಿವಶಿಂಪಿ, ನೇಕಾರ, ಕುರುಹಿನಶೆಟ್ಟಿ, ಸಜ್ಜನ, ಕರೆಕುಲ, ಗಾಣಿಗೇರ, ಸಾದರು, ನಾಮದರೆಡ್ಡಿ, ಲಿಂಗಾಯತ ರೆಡ್ಡಿ, ಪಾಕನಾಕ ರೆಡ್ಡಿ, ಕುಡುಒಕ್ಕಲಿಗ, ಹಡಪದ, ಮಡಿವಾಳ ಸೇರಿದಂತೆ ಲಿಂಗಾಯತ ಹಾಗೂ ಬ್ರಾಹ್ಮಣ ಉಪ ಪಂಗಡದದ ವಧು–ವರರು ಹಾಗೂ ಅವರ ಪಾಲಕರು ಭಾಗವಹಿಸಬಹುದು’ ಎಂದು ಹೇಳಿದರು.

ಅಂತರ್ಜಾತಿ ವಿವಾಹ ಅಪೇಕ್ಷಿತರು, ವಿಚ್ಛೇದಿತರು ಭಾಗವಹಿಸಬಹುದು. ಮಾಹಿತಿಗೆ ಧಾರವಾಡದ ಮರಾಠಾ ಕಾಲೊನಿಯಲ್ಲಿರುವ ಸೇವಾ ಕೇಂದ್ರ ಅಥವಾ ಸುರೇಶ ಕುಪ್ಪಸಗೌಡರ (96111 42568) ಸಂಖ್ಯೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !