ಹುಬ್ಬಳ್ಳಿ: ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮೇ 16 ಮತ್ತು 17ರಂದು 12ನೇ ಮೇ ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದ್ದು, 'ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರದಾರಿಗಳು' ವಿಷಯದ ಅಡಿಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ' ಎಂದು ಪ್ರಗತಿಪರ ಚಿಂತಕ, ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.

'ಗದುಗಿನ ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಕ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಮೇಳ ನಡೆಯಲಿದೆ. ಮೇ 16ರಂದು ಬೆಳಿಗ್ಗೆ 10 ಕ್ಕೆ ಉದ್ಘಾಟನಾ ಗೋಷ್ಠಿಯನ್ನು ಸನತಕುಮಾರ ಬೆಳಗಲಿ, ಬಿ.ಎಸ್. ಸೊಪ್ಪಿನ, ಕೆ.ಎಸ್. ಶರ್ಮಾ, ವಿವೇಕಾನಂದ ದೊಡಮನಿ, ಬೀಬೀಜಾನ್ ಮುಲ್ಲಾ, ಫರೀದಾ ಕರ್ನೂಲ್ ಮತ್ತು ಲಿನೆಟ್ ಡಿಸಿಲ್ವ ಉದ್ಘಾಟಿಸಲಿದ್ದಾರೆ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಸಾಂವಿಧಾನಿಕ ಪ್ರಜಾಸತ್ತೆ: ಸ್ವರೂಪ-ಸಂಘರ್ಷದ ಇತಿಹಾಸ, ವರ್ತಮಾನ ಭಾರತದಲ್ಲಿ ಸಾಂವಿಧಾನಿಕ ಪ್ರಜಾಸತ್ತೆ: ಏನು ಎತ್ತ?, ಪ್ರಜಾಸತ್ತೆಯ ಮೇಲಿನ ದಾಳಿ: ಸೃಜನಶೀಲ ಸ್ಪಂದನೆ, ಪ್ರಜಾಸತ್ತೆ ಅಡಿಯಲ್ಲಿ ಅಸ್ಮಿತೆಯ ರಾಜಕಾರಣ, ಎಸ್ಐಆರ್: ಸಮಸ್ಯೆ-ಜನಾಂದೋಲನ ಹಾಗೂ ಇತರ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಮೇ 17ರಂದು ಬೆಳಿಗ್ಗೆ 8.30ಕ್ಕೆ ಚನ್ನಮ್ಮ ವೃತ್ತದಿಂದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದವರೆಗೆ ಎಸ್ಐಆರ್ ರದ್ದುಗೊಳಿಸುವ ಕುರಿತು ಪ್ರತಿಭಟನಾ ಜಾಥಾ ಹಮ್ನಿಕೊಳ್ಳಲಾಗಿದೆ' ಎಂದರು.

'ಕನ್ನಡ ಸಾಹಿತ್ಯ ಜನರ ಪರವಾಗಿ, ಅವರ ಧ್ವನಿಯಾಗಿ ನಿರಂತರ ಕೆಲಸಮಾಡಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳನ್ನು ಕೊಂಡುಕೊಳ್ಳುವ, ಅವರನ್ನು ಅಡಿಯಾಳಾಗಿಸುವ ಯತ್ನ ನಡೆಯುತ್ತಿದೆ. ಕನ್ನಡ ಸಾಹಿತ್ಯ ಬಂಡವಾಳಶಾಹಿಗಳ ಹಿತಾಸಕ್ತಿಗೆ ಒಳಗಾಗಿ, ಪ್ರಭುತ್ವದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವತ್ತ ಸಾಗಿದೆ. ಜನರ ಧ್ವನಿಯಾಗಿರುವ ಸಾಹಿತ್ಯದ ಪರಂಪರೆ ಹಾಗೆಯೇ ಮುಂದುವರಿಯಬೇಕು, ಪುನರುತ್ಥಾನ ದಾರಿಯಲ್ಲಿ ಸಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ' ಎಂದರು.

ಶ್ಯಾಮಲಾ ಗುರುಪ್ರಸಾದ, ಇಸಬೆಲ್ಲ ದಾಸ್, ಗುರುನಾಥ ಉಳ್ಳಿಕಾಶಿ, ನಾಗರಾಜ ಗುರಿಕಾರ, ಲಿಂಗರಾಜ ಅಂಗಡಿ, ಮಹೇಶ ಪತ್ತಾರ, ಸುನಂದಾ ಕಡಮೆ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.