ಶನಿವಾರ, ಮೇ 28, 2022
31 °C
ಧಾಜಿಕಾನಿಪ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಧಾರವಾಡ | ‘ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಪಾತ್ರ ದೊಡ್ಡದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು.‌ ಸಮಾಜವನ್ನು ಸದಾ ಎಚ್ಚರದಿಂದ ಇಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸೋಮವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳ ಜೊತೆಗೆ ಸಕಾರಾತ್ಮಕ ಸುದ್ದಿಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಜನರಿಗೆ ಸೃಜನಾತ್ಮಕ ಸುದ್ದಿಗಳನ್ನು ಕೊಡುವ ಕೆಲಸ ಮಾಡಬೇಕು. ಪತ್ರಕರ್ತರು ಕಾಲಕ್ಕೆ ತಕ್ಕಂತೆ, ವೃತ್ತಿಗೆ ಪೂರಕವಾದ ತಂತ್ರಜ್ಞಾನ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡುವುದಕ್ಕಾಗಿ, ಸಂಬಂಧಪಟ್ಟವರಿಗೆ ಸೂಚನೆ ಸೂಚನೆ ನೀಡುವೆ. ಅಲ್ಲದೆ, ಸಂಘದ ಆರೋಗ್ಯ ನಿಧಿ ಸೇರಿದಂತೆ ಇತರ ಚಟುವಟಿಕೆಗಳಿಗೆ ಅಗತ್ಯ ನೆರವು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಆಶಯ ನುಡಿಗಳನ್ನಾಡಿದ ಸಂಘದ ರಾಜ್ಯ ಸಮಿತಿ ಸದಸ್ಯ ಹಾಗೂ ನಿಕಟಪೂರ್ವ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅವರು, ಜಿಲ್ಲಾ ಘಟಕದ ನೂತನ ಅಧ್ಯಕ್ಷ ಲೋಚನೇಶ ಹೂಗಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಉಪಾಧ್ಯಕ್ಷರಾಗಿ ತನುಜಾ ನಾಯಕ, ಬಸವರಾಜ ವಿಜಾಪುರ, ಕಾರ್ಯದರ್ಶಿಗಳಾಗಿ ಡಾ.ವೀರೇಶ ಹಂಡಗಿ, ಅಶೋಕ ಘೋರ್ಪಡೆ, ಪ್ರಕಾಶ ನೂಲ್ವಿ, ಖಜಾಂಚಿಯಾಗಿ ಬಸವರಾಜ ಹೂಗಾರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಓದೇಶ ಸಕಲೇಶಪುರ, ಕಾಶಪ್ಪ ಕರದಿನ, ಕೇಶವಮೂರ್ತಿ ವಿ.ಬಿ, ಗುರು ಭಾಂಡಗೆ, ದತ್ತಾತ್ರೇಯ ಪಾಟೀಲ, ನಾರಾಯಣಗೌಡ ಪಾಟೀಲ, ಪ್ರಕಾಶ ಚಳಗೇರಿ, ಪ್ರಸನ್ನಕುಮಾರ ಹಿರೇಮಠ, ಬಂಡು ಕುಲಕರ್ಣಿ, ಮಂಜುನಾಥ ಜರತಾರಘರ, ಮಲ್ಲಿಕಾರ್ಜುನ ಬಾಳನಗೌಡ್ರ, ಮೆಹಬೂಬ್‌ ಮುನವಳ್ಳಿ, ಯಲ್ಲಪ್ಪ ಸೋಲಾರಗೊಪ್ಪ, ಶಿವಾನಂದ ಗೊಂಬಿ ಹಾಗೂ ಸಂಗಮೇಶ ಮೆಣಸಿನಕಾಯಿ ಪದಗ್ರಹಣ ಮಾಡಿದರು.

ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ ಮತ್ತು ಭವಾನಿಸಿಂಗ್ ಠಾಕೂರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.