ಧಾರವಾಡ: ಕಿತ್ತೂರು ಮಾರ್ಗವಾಗಿ ಬೆಳಗಾವಿ ಸಂಪರ್ಕಿಸುವ ರೈಲು ಯೋಜನೆಯ ಭೂಸ್ವಾಧೀನಕ್ಕೆ ₹150ಕೋಟಿ ಅನುದಾನ, ಬೈಪಾಸ್ನ ಷಟ್ಪಥ ರಸ್ತೆಗೆ ₹1,200 ಘೋಷಿಸುವ ಮೂಲಕ ಸಂಪರ್ಕಕ್ಕೆ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾತೃ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನಿರ್ದಿಷ್ಟ ಅನುದಾನ ಘೋಷಿಸದಿರುವುದೂ ಕನ್ನಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಹೆಚ್ಚಿನ ಅನುದಾನವನ್ನು ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೋರಿತ್ತು. ಜ.31ಅನ್ನು ವಿಶ್ವ ಕವಿ ದಿನವನ್ನಾಗಿ ಘೋಷಿಸುವಂತೆಯೂ ಕೇಳಿತ್ತು. ಇತರ ಟ್ರಸ್ಟ್ಗಳೂ ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿದ್ದವು. ಆದರೆ ಅಂಥ ಯಾವುದೇ ಘೋಷಣೆಗಳು ಮಂಡನೆಯಾಗಿಲ್ಲ. ಮಠಗಳಿಗೆ ಅನುದಾನ ಘೋಷಣೆಯಾಗಿದ್ದರೂ, ಈ ಹಿಂದೆ ಘೋಷಣೆಯಾದ ಪ್ರಮಾಣದಲ್ಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

‘ಇತ್ತೀಚೆಗೆ ಭೂಮಿಪೂಜೆ ನೆರವೇರಿದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ಗೆ ಅನುದಾನ ನೀಡಲಾಗುವುದು ಎಂದಷ್ಟೇ ಹೇಳಿರುವುದರಲ್ಲಿ ಸ್ಪಷ್ಟತೆ ಇಲ್ಲ. ಈಗಾಗಲೇ ನಿರ್ಮಾಣಗೊಂಡಿರುವ ಸ್ವಯಂಚಾಲಿತ ವಾಹನ ಚಾಲನೆಯ ಪರೀಕ್ಷಾ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಬಜೆಟ್ ಪ್ರತಿಯಲ್ಲಿ ಹೇಳಲಾಗಿದೆ. ಈ ಹಿಂದೆ ಆಗಿರುವುದನ್ನೇ ಹೇಳಲಾಗಿದೆ’ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.

ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಪ್ರತಿಕ್ರಿಯಿಸಿ, ‘ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಅಗತ್ಯವಿರುವ ಹೊರ ವರ್ತುಲ ರಸ್ತೆಯ ಪ್ರಸ್ತಾಪವಿಲ್ಲ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗಿಗೂ ಮನ್ನಣೆ ದೊರೆತಿಲ್ಲ. ಬೆಣ್ಣೆ ಹಳ್ಳಿ, ತುಪ್ಪರಿ ಹಳ್ಳಗಳ ಪ್ರವಾಹಕ್ಕೆ ಶಾಶ್ವತ ಪರಿಹಾರವನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

ಒಂದು ಜಿಲ್ಲೆ ಒಂದು ಬೆಳೆಯಡಿ ಆಯ್ಕೆಯಾಗಿರುವ ಮಾವು ಮಾರುಕಟ್ಟೆ ಸ್ಥಾಪನೆ ಹಾಗೂ ಶೇಖರಣೆ ಮತ್ತು ಮೌಲ್ಯವರ್ಧನೆಗೆ ಅನುದಾನ ನೀಡಬೇಕಿತ್ತು ಎಂಬ ಅಭಿಪ್ರಾಯ ಮಾವು ಬೆಳಗಾರರಿಂದ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.