ಗುರುವಾರ , ಜುಲೈ 29, 2021
23 °C

ಕೊರೊನಾ ನಿರ್ವಹಣೆಯಲ್ಲಿ‌ ವಿಶ್ವಕ್ಕೆ ಮೋದಿ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಶ್ವವನ್ನು ಕಾಡುತ್ತಿರುವ ಕೊರೊನಾ ನಿರ್ವಹಣೆಯಲ್ಲಿ ವಿಶ್ವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದುವರೆದ ರಾಷ್ಟ್ರಗಳಿಗೂ ಗೊತ್ತಾಗುತ್ತಿಲ್ಲ. ಮೋದಿಯನ್ನು ಅನುಸರಿಸುತ್ತಿದ್ದಾರೆ. ಜಗತ್ತು ಮೆಚ್ಚುವ ಹಾಗೆ ನಿಭಾಯಿಸಿದ್ದಾರೆ ಎಂದರು.

ವೈದ್ಯಕೀಯ, ಪೊಲೀಸ್, ಪೌರ ಕಾರ್ಮಿಕರು, ಮಾಧ್ಯಮದವರು ಶ್ರಮ ಪಡುತ್ತಿದ್ದಾರೆ. ನಮ್ಮ ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೊರೊನಾದಿಂದ ಮೃತಪಟ್ಟರೆ ₹ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಹವಾನಿಯಂತ್ರಿತ ಯಂತ್ರದಿಂದ ಹೊರಗಿನಗಿಂತ 17 ಪಟ್ಟು ಕಲುಷಿತ ಗಾಳಿ ಬರುತ್ತದೆ. ಹೆಫಾ ಫಿಲ್ಟರ್ ಅಳವಡಿಕೆಯಿಂದ ತಡೆಯಬಹುದು. ಇದನ್ನು ಪಾರ್ಲಿಮೆಂಟ್, ವಿಧಾನಸೌಧ, ಹೋಟೆಲ್ ಗಳಲ್ಲಿ ಅಳವಡಿಸುವಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.

ನನಗೆ ಬರುತ್ತಿರು ಮಾಜಿ ಸಂಸದನ ಪಿಂಚಣಿಯನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ. ಇನ್ನು ಮುಂದೆ ಪಿಂಚಣಿ ಪಡೆಯುವುದಿಲ್ಲ ಎಂದರು.

ಡೆಂಗಿ, ಮಲೇರಿಯಾ, ಪ್ಲೇಗ ಸೇರಿದಂತೆ ಹಲವು ರೋಗಗಳು ಬಂದಿವೆ. ಹಾಗೆಯೇ ಕೊರೊನಾ ಕೂಡ.  ಜೀವನ ಪದ್ಧತಿ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು