ಹುಬ್ಬಳ್ಳಿ: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಪ್ರಗತಿಗೆ ಸರ್ಕಾರದಿಂದ ಹಲವು ಯೋಜನೆಗಳ ಮೂಲಕ ಆರ್ಥಿಕ ನೆರವು ಹಾಗೂ ಸೌಲಭ್ಯಗಳು ದೊರೆಯುತ್ತಿದ್ದು, ಕೈಗಾರಿಕೋದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್. ಹೇಳಿದರು.

ನಗರದಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ (ಟಿಆರ್ಇಡಿಎಸ್) ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

‘ಎಂಎಸ್ಎಂಇ ಉದ್ದಿಮೆದಾರರು ವ್ಯಾಪಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಂದಾಯಿಸಲು ಟಿಆರ್ಇಡಿಎಸ್ ಎಲೆಕ್ಟ್ರಾನಿಕ್ ವೇದಿಕೆ ಉತ್ತಮವಾಗಿದ್ದು, ಇದರಿಂದ ಉದ್ದಿಮೆದಾರರಿಗೆ ನಗದು ಹರಿವು ಸುಧಾರಿಸುತ್ತದೆ. ಕೈಗಾರಿಕೋದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಮೂರ್ತಿ ಅವರು, ‘ಟಿಆರ್ಇಡಿಎಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 2017ರಲ್ಲಿಯೇ ಅನುಷ್ಠಾನಕ್ಕೆ ತಂದಿದೆ. ₹250 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ಮಾಡುವ ಕಂಪನಿಗಳು ಸರ್ಕಾರಕ್ಕೆ ಸರಕು ಮತ್ತು ಸೇವೆ ನೀಡಿದ್ದಲ್ಲಿ ನಿಗದಿತ ಅವಧಿಯೊಳಗೆ ಈ ವೇದಿಕೆಯ ಮೂಲಕ ಹಣ ಪಡೆದುಕೊಳ್ಳುವ ಸೌಲಭ್ಯವಿರುತ್ತದೆ’ ಎಂದರು.

‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಾಲೀಕರು ಹಾಗೂ ಕೈಗಾರಿಕೋದ್ಯಮಿಗಳು ಈ ವೇದಿಕೆಯಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಎಲ್ಲಾ ಬ್ಯಾಂಕ್ಗಳು ಟಿಆರ್ಇಡಿಎಸ್ ಸೇವೆ ನೀಡುವಂತೆ ಆರ್ಬಿಐ ಸೂಚಿಸಿರುತ್ತದೆ‘ ಎಂದು ಹೇಳಿದರು.

ಎಚ್ಇಎಫ್ ಅಧ್ಯಕ್ಷ ವಿಜೇಶ್ ಸೈಗಲ್ ಅವರು, ‘ಉದ್ಯಮ ನಡೆಸಲು ಹಣಕಾಸಿನ ಅರಿವು ತುಂಬಾ ಅವಶ್ಯ. ಕೈಗಾರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕೋವಿಡ್ ನಂತರದ ದಿನಗಳಲ್ಲಿ ಸಾಕಷ್ಟು ಸವಾಲು ಎದುರಿಸಿದ್ದವು. ಸಕಾಲಕ್ಕೆ ಹಣಕಾಸಿನ ನೆರವು ದೊರೆಯಲಿಲ್ಲ ಎಂದರೆ ಉದ್ಯಮ ನಡೆಸುವುದು ಕಷ್ಟ’ ಎಂದರು.

ಟಾಟಾ ಪವರ್ ಸೋಲಾರ್ನ ಪ್ರದೀಪ್ ಶೆಟ್ಟರ್ ಅವರು, ಸೋಲಾರ್ ಪವರ್ ಬಗ್ಗೆ ಮಾಹಿತಿ ನೀಡಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ್, ಸಣ್ಣ ಕೈಗಾರಿಕೆಗಳ ಸಂಘದ ಎಂ.ಟಿ.ಸಾಗರ, ಸುಧಾ ಜೆ.ಪವಾರ, ಶಿವಾನಂದ ಕಮ್ಮಾರ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಜಿಲ್ಲೆಯ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.