ಅ.3ರಂದು ಮಧ್ಯಾಹ್ನ 3.45ಕ್ಕೆ ನಲ್ಲನಮ್ಮ ದೇವಿಗೆ ಮಹಾಅಭಿಷೇಕ ಹಾಗೂ ಘಟಸ್ಥಾಪನೆ ನೆರವೇರಲಿದೆ. ಅ.8ರಂದು ಸಂಜೆ 5ಕ್ಕೆ ಕುಂಕುಮಾರ್ಚನೆ ಕಾರ್ಯಕ್ರಮ, ಅ.10 ರಂದು ಮಧ್ಯರಾತ್ರಿ 12ಕ್ಕೆ ಅಷ್ಟಮಿ ಬಲಿಪಾಡ್ಯ, ಅ.11ರಂದು ರಾತ್ರಿ 12ಕ್ಕೆ ಮಹಾನವಮಿ ಖಂಡೆಪೂಜೆ, ಮಹಾಮಂಗಳಾರತಿ, ಆನಂತರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ. ಅ.12ರಂದು ವಿಜಯದಶಮಿ ನಿಮಿತ್ತ ಬನ್ನಿ ಮುಡಿಯುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದು ಕಮಿಟಿಯ ಪ್ರಧಾನ ಗೌರವ ಕಾರ್ಯದರ್ಶಿ ವೆಂಕಟೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.