ನವಲಗುಂದ: ಗೋವುಗಳ ಸುರಕ್ಷತೆಗೆ ಕಾನೂನು ರೂಪಿಸಬೇಕು ಹಾಗೂ ಗೋ ಪಾಲನಾ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ನವಲಗುಂದ ಗೋ ಸಂತರು ಮತ್ತು ಭಕ್ತರು, ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಗಣೇಶ ಚಳ್ಳಕೆರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಗೋ ಪಾಲನೆ ಕೇವಲ ಶ್ರದ್ಧೆಯ ವಿಷಯವಲ್ಲ; ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಗೋ ಸಂರಕ್ಷಣೆಗೆ ಕಾಯ್ದೆ ಜಾರಿಗೊಳಿಸಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯಬೇಕು’ ಎಂದು ಒತ್ತಾಯಿಸಿದರು.

ಗುರುನಗೌಡ ನರೇಂದ್ರ, ಸುಭಾಸ್ ತಡಹಾಳ, ರವಿಕುಮಾರ್ ಬಾರಕೇರ, ಮಲ್ಲಿಕಾರ್ಜುನ ಕುಂಬಾರ, ಈರಣ್ಣ ಪೂಜಾರ, ಮಣಿಕಂಠ ದೊಡ್ಡಮ್ಮನವರ, ಮಲ್ಲಪ್ಪ ಗಾಣಿಗೇರ, ನಾಗೇಶಗೌಡ ಮುದಿಗೌಡರ, ಮಂಜುನಾಥ ಕೋಟಿ, ಕಲ್ಲಪ್ಪ ಭುಜಂಗಣ್ಣವರ, ಬಸನಗೌಡ ಮರೀಗೌಡ್ರ, ದೇವರಾಜಪ್ಪ ಹಿರೇಮಠ ಇದ್ದರು.

ಕುಂದಗೋಳ ವರದಿ: ‘ಗೋವಿಗೆ ರಾಷ್ಟ್ರ ಮಾತೆಯ ಸ್ಥಾನ ನೀಡಬೇಕು’ ಎಂಧುದು ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಹೇಳಿದರು.

ಗೋಮಾತೆ ಗೌರವ ಅಭಿಯಾನ ಅಂಗವಾಗಿ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಸಂಪೂರ್ಣ ಜಾರಿಯಾಗಬೇಕೆಂದು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಗೋವುಗಳ ರಕ್ಷಣೆಗೆ ಹೋರಾಡುತ್ತಿರುವವರ ಜೊತೆ ನಾವಿದ್ದೇವೆ’ ಎಂದರು.

ಪಟ್ಟಣದ ಗಾಳಿಮರೆಮ್ಮ ದೇವಸ್ಥಾನ ಹತ್ತಿರ ಹಿರೇಮಠದ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಗೋಮಾತೆಗೆ ಪೂಜೆ ಸಲ್ಲಿಸಿದರು.ತಹಶೀಲ್ದಾರ್ ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಶಾನಬಾಗ ಅವರಿಗೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದಿವಟಗಿ, ವಿಶ್ವಾಸ ನಾಗಶೆಟ್ಟಿ, ವಿಜಯ ಗೂಡಲಮನಿ, ಗಣೇಶ ಕೋಕಾಟೆ, ಸಿದ್ದು ಧಾರವಾಡಶೆಟ್ರ, ಹರಿಷ ಕೊನೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-24-1310040397

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.