ನವಲಗುಂದ: ತಾಲ್ಲೂಕು ಕೇಂದ್ರವಾಗಿರುವ ನವಲಗುಂದದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದ್ದು, ಸರ್ಕಾರ ಕೂಡಲೇ ಇಲ್ಲಿಗೆ ನೂತನ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಪರಿವರ್ತನಾ ಸಮುದಾಯ ಸಂಘದಿಂದ ತಹಶೀಲ್ದಾರ್ ಸುಧೀರ ಸಾಹುಕಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಮಾತನಾಡಿ, ‘ನವಲಗುಂದ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ನಾವು ಅಣ್ಣಿಗೇರಿ ಅಥವಾ ನರಗುಂದದಿಂದ ಬರುವ ಅಗ್ನಿಶಾಮಕ ದಳದ ಮೇಲೆ ಅವಲಂಬಿತರಾಗಬೇಕಿದೆ’ ಎಂದರು.

ಅಣ್ಣಿಗೇರಿಯಿಂದ ವಾಹನಗಳು ಸುಮಾರು 20ರಿಂದ 30 ಕಿ.ಮೀ ದೂರ ಕ್ರಮಿಸಿ ಬರುವಷ್ಟರಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ, ರೈತರ ಬಣವೆಗಳು, ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳು ಭಸ್ಮವಾಗಿ ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿವೆ. ಹಾಗಾಗಿ ಕೂಡಲೇ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಮೆಹಬೂಬಸಾಬ ಅಸಗಿ, ಮಹಮ್ಮದಲಿ ಮಿರ್ಜಿ, ಶಿವಲಿಂಗಯ್ಯ ಹಿರೇಮಠ, ಇಮ್ತಿಯಾಜ್ ಖತಿಬ್,ಶರೀಪ್ ಹುಡೇದ, ಮುಜೀಬ್ ಬಳ್ಳಾರಿ, ಬಸವರಾಜ್ ಮಲ್ಲದಾಸರ, ಸದ್ದಾಂಹುಸೇನ್ ಯರಗುಪ್ಪಿ, ಮಾಬುಲಿ ಮುಲ್ಲಾ, ಮಾಬುಸಾಬ ಕೆರೂರ ಸೇರಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-24-324801144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.