ನವಲಗುಂದ: ‘ರಕ್ತದಾನ, ಮಹಾದಾನ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯವಂತರು ರಕ್ತದಾನ ಮಾಡಬೇಕು’ ಎಂದು ಹುಬ್ಬಳ್ಳಿಯ ರೋಟರಿ ಬ್ಲಡ್ ಬ್ಯಾಂಕ್ನ ತಾಂತ್ರಿಕ ನಿರ್ದೇಶಕರಾದ ರಾಧಿಕಾ ಆಪ್ಟೆ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಭಾರತೀಯ ರೆಡ್ಕ್ರಾಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಎಸ್ಎಸ್ ಹಾಗೂ ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಎಂ.ಬಿ.ಬಾಗಡಿ ಮಾತನಾಡಿ, ‘ಅರ್ಹತೆ ಇರುವ ಎಲ್ಲ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮುಖಾಂತರ ರೋಗಿಗಳಿಗೆ ನೆರವಾಗಬೇಕು’ ಎಂದರು.

ಸಿಪಿಐ ರವಿಕುಮಾರ ಕಪ್ಪತ್ತಣ್ಣವರ, ಪಿಎಸ್ಐ ಜನಾರ್ದನ್ ಭಟ್ರಳ್ಳಿ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 40 ಯೂನಿಟ್ ರಕ್ತದಾನ ಮಾಡಿದರು.

ಗಣೇಶ್ ಧೋoಗಡಿ, ಗಂಗಾಧರ ಗೌಡರ, ಪ್ರಸನ್ನ ಪಂಢರಿ, ಶ್ರೀಧರ ಲೋನಕರ್, ರವಿ ಬ್ಯಾಹಟ್ಟಿ, ಮಧು ಹುಣಸಗಿ, ಸುಜಾತಾ ಬರದೂರ, ಪ್ರಹತ್ ತಂದೂರ್, ವಸಂತ ಮುಂದಿನಮನಿ, ಜ್ಯೋತಿಭಾ ದೊಡಮನಿ, ಭಾರತಿ ಭೋವಿ, ಸುರೇಶ ಬಾರಕೇರ,ಶ್ರೀಧರ ಕಲ್ಲೂರ, ಸವಿತಾ ಚಿಕ್ಕಣ್ಣವರ, ಸಂತೋಷ ಹುಬ್ಬಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-1397853305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.