ನವಲಗುಂದ: ಪುರಸಭೆ ವ್ಯಾಪ್ತಿಯ ಹೋಟೆಲ್ ಹಾಗೂ ಆಹಾರ ಮಂದಿರಗಳ ಮೇಲೆ ಪುರಸಭೆ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಹೋಟೆಲ್ ಅಡುಗೆ ಕೋಣೆ ಹಾಗೂ ಆವರಣ ಅಸ್ವಚ್ಛತೆಯಿಂದ ಕಂಡಿದ್ದು, ಜೊತೆಗೆ ಆಹಾರ ತಯಾರಿಕೆಯಲ್ಲೂ ಶುಚಿತ್ವ ಇಲ್ಲದ್ದನ್ನು ಗಮನಿಸಿದ ಅಧಿಕಾರಿಗಳು ಮಾಲೀಕರು, ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ಹೊಟೇಲ್ನ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆ ಕಂಡು ಬರುವ ಪರಿಸ್ಥಿತಿಗೆ ನೀವೇ ಕಾರಣವಾಗುತ್ತಿದ್ದೀರಿ. ಸ್ವಚ್ಛತೆ ಸುಧಾರಿಸದಿದ್ದರೆ ಕರ್ನಾಟಕ ಪುರಸಭೆ ಅಧಿನಿಯಮ, ಆಹಾರ ಸುರಕ್ಷತಾ ಅಧಿನಿಯಮಗಳ ಅನುಸಾರ ನಿಮ್ಮ ಮೇಲೆ ಕ್ರಮ ಜರುಗಿಸುವುದಾಗಿ ನೋಟಿಸ್ ನೀಡಿ ಪರವಾನಗಿ ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಮುಖ್ಯಾಧಿಕಾರಿ ಎಸ್.ಪಿ.ಪೂಜಾರ ಮಾತನಾಡಿ, ಹೋಟೆಲ್ಗಳಲ್ಲಿ ಶುದ್ಧ ನೀರು ಹಾಗೂ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ಗೃಹ ಬಳಕೆಯ ಸಿಲಿಂಡರ್ ಬಳಸಬಾರದು. ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ ದಾಸ್ತಾನು ಮಾಡಿ ಅಪಾಯಕ್ಕೆ ಆಹ್ವಾನ ನೀಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು. ಆರೋಗ್ಯ ನಿರೀಕ್ಷಕಿ ಸಾವಿತ್ರಿ ಮುಶನವ್ವರ, ಅನಿಲ್ ಜೋಶಿ ಹಾಗೂ ತಂಡದ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-24-627814200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.