ನವಲಗುಂದ: ‘ಒತ್ತಡದ ದಿನಗಳಲ್ಲಿ ನೆಮ್ಮದಿಯ ಜೀವನಕ್ಕೆ ಸತ್ಸಂಗ, ಪ್ರವಚನಗಳು ಸಹಕಾರಿ’ ಎಂದು ಅರಹಟ್ಟಿ ಗ್ರಾಮದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅರಹಟ್ಟಿ ಗ್ರಾಮದ ಮುರುಘರಾಜೇಂದ್ರ ಕೋರಣೇಶ್ವರ ವಿರಕ್ತಮಠ ಮಹಾರಥೋತ್ಸವ ಸ್ಥಳ ಬದಲಾವಣೆ ಹಾಗೂ ಪುರಾಣ, ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ‘ದೇಶದ ಸಂಸ್ಕೃತಿ, ಪರಂಪರೆ ತುಂಬಾ ಮಹತ್ವವಾದದ್ದು, ಆದರೆ, ಇಂದು ಮಕ್ಕಳಲ್ಲಿ ನೈತಿಕತೆ, ಧಾರ್ಮಿಕ ಭಾವನೆ ಕಡಿಮೆಯಾಗಿ ಆಚಾರ-ವಿಚಾರಗಳಿಂದ ದೂರ ಉಳಿಯುತ್ತಿದ್ದಾರೆ’ ಎಂದರು.

ಸಿದ್ಧಲಿಂಗಯ್ಯ ಅಜ್ಜನವರು, ತೋಟಪ್ಪ ಶರಣ, ಈರಯ್ಯ ಬೂಸನೂರಮಠ, ಸಿದ್ಧಣ್ಣ ಕೆಟಗೇರಿ, ನಿಂಗನಗೌಡ್ರ ಪಾಟೀಲ, ಬಸಣ್ಣ ಸವದಿ, ಮಲ್ಲಿಕಾರ್ಜುನ ಸಂಗನಗೌಡ್ರ, ನಿಂಗನಗೌಡ್ರ ಪಾಟೀಲ, ವೀರಭದ್ರ ಮಾಳವಾಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-24-1426800373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.