ನವಲಗುಂದ: ‘ಪಟ್ಟಣದಲ್ಲಿನ ಒತ್ತುವರಿಯಾಗಿರುವ ರಸ್ತೆಗಳನ್ನು ತಕ್ಷಣ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ತಿಳಿಸಿದರು.

ಪಟ್ಟಣದ ಸುಕ್ಷೇತ್ರ ಸಂಸ್ಥಾನ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಪತಿ ವೀರಬಸವ ದೇವರ ಗುರುಪಟ್ಟಾಭಿಷೇಕದ ಅಂಗವಾಗಿ ಪುರಸಭೆಯ ಸಹಭಾಗಿತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಸ್ವಚ್ಛತೆ ಕಡೆ’ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದೋರ್ ನಗರದ ಮಾದರಿಯಲ್ಲಿ ನವಲಗುಂದವೂ ಸ್ವಚ್ಛ ನಗರವಾಗಿ ರೂಪುಗೊಳ್ಳಬೇಕು. ‘ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವಾರದಲ್ಲಿ ಕನಿಷ್ಠ ಒಂದು ದಿನ, ಪ್ರತಿ ಓಣಿಯನ್ನು ಸ್ವಚ್ಛಗೊಳಿಸುವಂತೆ ಪುರಸಭೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಕಾರ್ಯದಲ್ಲಿ ಸಾರ್ವಜನಿಕರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪಂಚಗೃಹ ಹಿರೇಮಠದ ನೂತನ ಪೀಠಾಧಿಕಾರಿ ವೀರಬಸವ ದೇವರು ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಎಸ್.ಪಿ.ಪೂಜಾರ, ವಿ.ಪಿ. ಪಾಟೀಲ, ಜೀವನ ಪವಾರ, ಮೋದಿನ ಶಿರೂರ, ಪ್ರಕಾಶ ಶಿಗ್ಲಿ, ಮುಖಂಡರಾದ ಗಂಗಪ್ಪ ಹಳ್ಳದ, ಎಸ್.ಕೆ.ದೋಟಿಕಲ, ಶಂಕ್ರಯ್ಯ ಸುಬಬೇದಾರಮಠ, ಶಿದ್ದಲಿಂಗಯ್ಯ ಹಿರೇಮಠ ಹಾಗೂ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-24-323527654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.