ನವಲಗುಂದ: ’ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಸೇವಾನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಿರಲಿ ಎಂದು ಶಿಕ್ಷಕಿ ಎಸ್.ಡಿ.ದೊಡ್ಡಬಸನಗೌಡ್ರ ಹೇಳಿದರು.

ತಾಲ್ಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲೆ ಶಿಕ್ಷಕ ಎಸ್.ಜಿ.ಗೊಣಸಂಗಿ ಬೀಳ್ಕೊಡುಗೆ ಹಾಗೂ ಅವರ ಸೇವಾ ನಿವೃತ್ತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಯುವ ಮುಖಂಡ ಫಕ್ಕೀರೇಶ ಪಡೆಸೂರ ಮಾತನಾಡಿ, ‘ಶಿಕ್ಷಕ ಎಸ್.ಜಿ.ಗೊಣಸಂಗಿ ಅವರ ಸೇವೆ ನಮ್ಮ ಶಾಲೆಗೆ ಅಪಾರ. ಅವರು ಹೇಳಿ ಕೊಟ್ಟ ಪಾಠ ಮಕ್ಕಳಲ್ಲಿ ಅಚ್ಚ ಅಳಿಯದೆ ಉಳಿದಿವೆ. ಅವರು ಈ ಶಾಲೆಯಿಂದ ಅಷ್ಟೆ ನಿವೃತ್ತಿ ಹೊಂದಿರಬಹುದು, ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಮನಸ್ಸಿಂದ ಅಲ್ಲ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ’ ಎಂದರು.

ಪ್ರಧಾನ ಗುರುಗಳಾದ ಎಚ್.ಡಿ.ಜಿಡ್ಡಿಮನಿ, ವಿ.ಎನ್.ಲಿಂಗರಡ್ಡಿ, ಎಸ್.ಎಂ.ತಳವಾರ, ವಿರೇಶ್ ಗುಳೆದ, ಕಲ್ಮೇಶ ಹೂಗಾರ, ಮುತ್ತು ಜಂಗಣ್ಣವರ, ಕುಮಾರ ಹಡಪದ, ನಾಗಲಿಂಗಪ್ಪ ಉಳ್ಳೆಗಡ್ಡಿ ಸೇರಿದಂತೆ ಎಸ್ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-24-1038405354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.