ನವಲಗುಂದ: ಪಟ್ಟಣದ ಕೆಲವು ಬಡಾವಣೆಗಳಿಗೆ ಕಸ ಸಂಗ್ರಹ ವಾಹನಗಳು ಬಾರದೆ ಇರುವುದರಿಂದ ರಸ್ತೆ ಬದಿ, ಕೆರೆ ದಂಡೆ, ನಿವೇಶನ, ಬಸ್ ನಿಲ್ದಾಣ, ಪಾಳು ಜಾಗ, ಕಟ್ಟಡದ ಪ್ರದೇಶಗಳಲ್ಲಿ ಕಸ ಎಸೆಯುವ ಪರಿಪಾಠ ತೀವ್ರವಾಗಿದೆ.

‘ರಸ್ತೆ ಬದಿ, ನಿವೇಶನಗಳಲ್ಲಿ ಕಸ ಸುರಿದರೆ ದಂಡ ವಿಧಿಸಲಾಗುವುದು’ ಎಂಬ ಫಲಕಗಳು ಹೆಸರಿಗೆ ಮಾತ್ರ ಎಂಬಂತಾಗಿದೆ. ಈ ಫಲಕಗಳ ಬುಡದಲ್ಲಿಯೇ ಕಸ ಸುರಿಯಲಾಗುತ್ತಿದೆ.

‘ಪ್ರತಿದಿನ ಒಮ್ಮೆ ನಿಯಮಿತವಾಗಿ ಎಲ್ಲ ಬಡಾವಣೆಗಳಲ್ಲಿ ಕಸ ಸಂಗ್ರಹ ವಾಹನ ಬರುವಂತೆ ವ್ಯವಸ್ಥೆ ಮಾಡಬೇಕು. ಬೀದಿ ಬದಿಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಬೇಕು. ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯಲಾಗುತ್ತಿದೆ. ಇದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ’ ಎಂಬುದು ನಿವಾಸಿಗಳ ಆಕ್ಷೇಪವಾಗಿದೆ. ಮಾಂಸದ ಚೂರುಗಳಿಗೆ ಕಚ್ಚಾಡುವ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿವೆ ಎಂಬುದು ಅವರ ಆತಂಕ.

‘ಬೀದಿ ಬದಿಯಲ್ಲಿನ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ತ್ಯಾಜ್ಯ ನೀರು ಚೆಲ್ಲುತ್ತಾರೆ. ಅವರ ಮೇಲೆ ನಿಗಾ ಇಡುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ದೂರುತ್ತಿದ್ದಾರೆ.

ಹಾಲು, ಚಿಪ್ಸ್ ಪ್ಯಾಕೆಟ್, ಕ್ಯಾರಿಬ್ಯಾಗ್, ಪೇಪರ್ ಬ್ಯಾಗ್, ನೀರಿನ ಬಾಟಲಿ, ಗಾಜಿನ ಚೂರುಗಳು, ಲೋಹದ ವಸ್ತುಗಳು, ಪ್ಲಾಸ್ಟಿಕ್, ಪ್ಯಾಕಿಂಗ್ ಡಬ್ಬಿಗಳೊಂದಿಗೆ ತರಕಾರಿ, ಹಣ್ಣು, ಉಳಿದ ಊಟ ಇತ್ಯಾದಿ ಕಸ ಎಸೆಯಲಾಗುತ್ತದೆ. ಇದು ಬೀಡಾಡಿ ದನಗಳಿಗೂ ಮಾರಕವಾಗಿದೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಬಿಟ್ಟು ಬೇರೆಡೆ ಕಸ ಸುರಿಯಲಾಗುತ್ತಿದೆ. ಕಸವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಕಸದಿಂದ ರಸ ತೆಗೆದು ಲಾಭ ಮಾಡಿಕೊಳ್ಳುವ ಯೋಜನೆ ಇಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

‘ಮೊದಲು ನಿತ್ಯ ಬೆಳಿಗ್ಗೆ ಕಸ ಸಂಗ್ರಹಿಸಲು ಬರುತ್ತಿದ್ದ ಗಾಡಿ, ಕಳೆದ ಒಂದು ವರ್ಷದಿಂದ ಇತ್ತ ಸುಳಿದೇ ಇಲ್ಲ. ಕಸ ಮನೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ. ಹೀಗಾಗಿ ರಸ್ತೆ ಪಕ್ಕ ಚೆಲ್ಲುವ ಪರಿಸ್ಥಿತಿ ಉಂಟಾಗಿದೆ. ಮೊದಲಿನಂತೆ ಕಸದ ಗಾಡಿ ಮನೆ ಬಳಿ ಬರುವಂತಾದರೆ ನೈರ್ಮಲ್ಯ ಕಾಪಾಡಿಕೊಳ್ಳಬಹುದು’ ಎಂದು ಸ್ಥಳೀಯ ಮಹಿಳೆ ಪದ್ಮಾವತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-235335356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.